ಉದ್ಯೋಗ ನಮ್ಮ ಹಕ್ಕು ಸಹಿ ಸಂಗ್ರಹ ಅಭಿಯಾನ,

0
147

ಖಾಲಿ ಇರುವ ಹುದ್ದೇಗಳ ಭರ್ತಿಗೆ ಆಗ್ರಹಿಸಿ ಉದ್ಯೋಗ ನಮ್ಮ ಹಕ್ಕು  ಸಹಿ ಸಂಗ್ರಹ ಅಭಿಯಾನ, ಸರ್ಕಾರಗಳಿಂದ ಯುವಕರ ದಾರಿ ತಪ್ಪಿಸುವ ಕೆಲಸ- ಬಾಬು ಭಂಡಾರಿಗಲ್

ರಾಯಚೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯುವಜನರಿಗೆ ಉದ್ಯೋಗದ ಭರವಸೆಯನ್ನು ನೀಡಿ ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಸಾಹಿತಿ ಬಾಬು ಭಂಡಾರಿಗಲ್ ಆಕ್ರೋಶ ವ್ಯಕ್ತ ಪಡಿಸಿದರು.

 

ನಗರಸಭೆ ಮುಂದೆ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್‍ದಿಂದ ಉದ್ಯೋಗಕ್ಕಾಗಿ ಆಗ್ರಹಿಸಿ ಕೋಟ್ಯಾಂತರ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರವು ವರ್ಷಕ್ಕೆ 2ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು. ಆದರೆ ಉದ್ಯೋಗಗಳ  ಸೃಷ್ಟಿ ಮರೆತು ಬದಲಾಗಿ ಪಕೋಡ ಮಾರಿ ಜೀವನ ಮಾಡಬಹುದು ಎಂದು ಮಾತನಾಡುತ್ತಿರುವುದು ಹಾಸ್ಯಸ್ಪದವಾಗಿದೆ.

ರಾಜ್ಯದ ಕಾಂಗ್ರೆಸ್ ಸರ್ಕಾರ ಒಟ್ಟು 7ಲಕ್ಷ ಹುದ್ದೆಗಳಲ್ಲಿ 2.5ಲಕ್ಷ ಹುದ್ದೆಗಳು ಖಾಲಿ ಬಿದ್ದಿವೆ. ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ 5ವರ್ಷದಲ್ಲಿ 50ಸಾವಿರ ಹುದ್ದೆ ಭರ್ತಿ ಮಾಡುವ ಭರವಸೆ ನೀಡಲಾಗಿತ್ತು. ಕೇವಲ 18ಸಾವಿರ ಹುದ್ದೆ ಭರ್ತಿ ಮಾಡಿದ್ದೇವೆ ಎನ್ನುತ್ತಿದ್ದಾರೆ. ಆದರೆ ಇನ್ನೂ 32 ಸಾವಿರ ಹುದ್ದೆ ಭರ್ತಿಯಾಗಬೇಕಿದೆ ಎಂದರು.

ಎಐಡಿವೈಓ ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್ ಮಾತನಾಡಿ,  ಯುವಜನರನ್ನು ಮತಬ್ಯಾಂಕ್ ಆಗಿ ಪರಿಗಣಿಸಿರುವ ಎಲ್ಲಾ ಪಕ್ಷಗಳು ಚುನಾವಣೆಯಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಿವೆ. ಈ ಯುವಜನ ವಿರೋಧಿ ನೀತಿಯ ವಿರುದ್ಧ ಎಲ್ಲಾ ಯುವಜನ ಒಂದುಗೂಡಿ ಹೋರಾಟ ಬೆಳೆಸಬೇಕಾಗಿದೆ. ಆದ್ದರಿಂದ ವ್ಯಾಪಕ ಜನಾಭಿಪ್ರಾಯ ರೂಪಿಸಲು ದೇಶಾದ್ಯಂತ ಈ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ದೇಶಾದ್ಯಂತ ಖಾಲಿ ಇರುವ ಹುದ್ದೆ ಭರ್ತಿ ಮಾಡಿ, ಉದ್ಯೋಗ ಮೂಲಭೂತ ಹಕ್ಕ ಎಂದು ಘೋಷಿಸಿ, ಗುತ್ತಿಗೆ ಪದ್ಧತಿ ರದ್ದು ಮಾಡಿ ಹಾಗು ಇನ್ನಿತರ ಬೇಡಿಕೆಗಳಿಗಾಗಿ ಅಗ್ರಹಿಸಿ ಸಹಿಗಳನ್ನು ಸಂಗ್ರಹ ಮಾಡಲಾಯಿತು.

ಈ ಸಂದರ್ಭದಲ್ಲಿ ಮಹೇಶ ಚೀಕಲಪರ್ವಿ, ವಿರೇಶ, ಎಚ್.ಬಿ ಗಂಟೆ, ವೈ.ಪ್ರಮೋದ ಸೇರಿದಂತೆ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here