ಉನ್ನತ ವ್ಯಾಸಂಗಕ್ಕೆ ನೆರವು…

0
148

ಚಾಮರಾಜನಗರ/ಕೊಳ್ಳೇಗಾಲ:ಪ್ರೌಡಶಾಲಾ ಹಂತದಿಂದ ಉನ್ನತ ವ್ಯಾಸಂಗಕ್ಕೆ ತೆರಳುತ್ತಿರುವ ಕಡು ಬಡವ ವಿದ್ಯಾಥಿ೯ಗಳ  ಶೈಕ್ಷಣಿಕ ಪ್ರಗತಿಯ  ಪ್ರೋತ್ಸಾಹಕ್ಕಾಗಿ ಜೆಡಿಎಸ್
ಮುಖಂಡ ಹಾಗೂ ಮೌಯ೯ ಚಾರಿಟಬಲ್   ಟ್ರಸ್ಟ್ ಅದ್ಯಕ್ಷರೂ ಆದ  ಲೋಕೇಶ್ ಮೌಯ೯ ಅವರು  ತಾಲೂಕಿನ ಮಾಟ೯ಳ್ಳಿ ಜಿಪಂ ವ್ಯಾಪ್ತಿಯ
ಸುಳ್ವಾಡಿ  ಗ್ರಾಮದಲ್ಲಿ 1.72ಲಕ್ಷ ರೂಗಳ ನೆರವು ನೀಡಿದ್ದಾರೆ.

ಹಲವು  ವಿದ್ಯಾಥಿ೯ಗಳ  ಶೈಕ್ಷಣಿಕ ಪ್ರಗತಿಗೆ ಆಥಿ೯ಕ ಪರಿಸ್ಥಿತಿ ಹಿನ್ನಡೆಯಾದ ಹಿನ್ನೆಲೆ ಹಾಗೂ ಅವರ ಶೈಕ್ಷಣಿಕ ಪ್ರಗತಿಗಾಗಿ   ಹನೂರು ಶೈಕ್ಷಣಿಕ ವಲಯದ
ಸುಳ್ವಾಡಿ   ಗ್ರಾಮದ ರೇಖಾ ಎಂಬ ವಿದ್ಯಾಥಿ೯ಗೆ ಬಿಕಾಂ ವ್ಯಾಸಂಗಕ್ಕಾಗಿ 20ಸಾವಿರ, ರಿಬೆಕಾ ಬಿಕಾಂ ವ್ಯಾಸಂಗಕ್ಕಾಗಿ 7ಸಾವಿರ,  ಬೀನಾ ಪಿಯುಸಿ ವ್ಯಾಸಂಗಕ್ಕಾಗಿ 7ಸಾವಿರ,ಮೇರಿನಾಗೆ 14ಸಾವಿರ, ಲೀಮಾ ಜಯಂತಿಗೆ ಬಿಎಡ್ ವ್ಯಾಸಂಗಕ್ಕಾಗಿ 15ಸಾವಿರ,  ನದೀಂಹುಲ್ಲಾಗೆ ಬಿಕಾಂ ವ್ಯಾಸಂಗಕ್ಕಾಗಿ 15ಸಾವಿರ, ಡೈಸಿ, ಪ್ರೇಮಲತಾ,ಡೈಸಸ್ ಕುಮಾರ್ ಸೇರಿದಂತೆ ಹಲವರಿಗೆ ಪಿಯುಸಿ ವ್ಯಾಸಂಗಕ್ಕಾಗಿ   ತಲಾ 5ಸಾವಿರ,  8ನೇ ತರಗತಿ  ವ್ಯಾಸಂಗಕ್ಕಾಗಿ ಶಕೀಲಾ ಸೌಂದಯ೯ ಎಂಬ ವಿದ್ಯಾಥಿ೯ನಿಗೆ  2ಸಾವಿರ ,  ಬಿಎ ವ್ಯಾಸಂಗಕ್ಕಾಗಿ ಸಂತೋಷಗೆ 20ಸಾವಿರ,
ಬಿಕಾಂ ವ್ಯಾಸಂಗಕ್ಕಾಗಿ ರೋಸಿ ಎಂಬ ವಿದ್ಯಾಥಿ೯ಗೆ 10ಸಾವಿರ ಸೇರಿದಂತೆ ಒಟ್ಟು 18ಕ್ಕೂ  ಹೆಚ್ಚು ವಿದ್ಯಾಥಿ೯ಗಳಿಗೆ 1.72ಲಕ್ಷ ರೂಗಳ ಧನ ಸಹಾಯವನ್ನು ಲೋಕೇಶ್ ಮೌಯ೯ ಇದೇ ಸಂದಭ೯ದಲ್ಲಿ ನೀಡಿದರು.

ಈಸಂದಭ೯ದಲ್ಲಿ ಮಾತನಾಡಿದ,   ಲೋಕೇಶ್ ಮೌಯ೯ ಅವರು   ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ  ಅವರು ಆಡಳಿತ ನಡೆಸಿದ  20ತಿಂಗಳ ನೀಡಿದ ಜನಾಡಳಿತಕ್ಕೆ ಉತ್ತಮ ಮನ್ನಣೆ  ಈಗಾಗಲೇ ದೊರೆತಿದೆ. ಮುಂಬರುವ  ಚುನಾವಣೆಯಲ್ಲಿ  ಕುಮಾರಸ್ವಾಮಿ   ಅವರು ಮುಖ್ಯಮಂತ್ರಿಯಾಗುವುದನ್ನು
ತಪ್ಪಿಸಲು  ಯಾರಿಂದಲೂ ಸಾಧ್ಯವಿಲ್ಲ ಎಂದರು.
ನಾನು ಸಾಮಾಜಿಕ  ಕಳಕಳಿಯಿಂದ ರಾಜಕೀಯಕ್ಕೆ ಪಾದಾಪ೯ಣೆ ಮಾಡಿದ್ದೆನೆ,  ಯಾವುದೆ ದುರುದ್ದೆಶದಿಂದ,   ಲಾಭಕ್ಕಾಗಿ ರಾಜಕೀಯಕ್ಕೆ ಬಂದಿಲ್ಲ, ಕ್ಷೇತ್ರದ ಜನರಿಗೆ, ಸಂಕಷ್ಟದಲ್ಲಿರುವವರಿಗೆ ನನ್ನ ಕೈಲಾದ ಸಹಾಯ ಮಾಡುತ್ತಿದ್ದೆನೆ. ಕೇವಲ ಪೊಳ್ಳು ಭರವಸೆ ನೀಡಿ ಹಿಂತಿರುಗಿ, ಮಲಗುವ ಜಯಮಾನ ನನ್ನದಲ್ಲ, ಇಂದಿನ ಕಾಯ೯ಕ್ರಮದಲ್ಲಿ ಉನ್ನತ ವ್ಯಾಸಂಗಕ್ಕೆ ಪಿಯುಸಿ ಮಟ್ಟದ ವ್ಯಾಸಂಗಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ 1.72ಲಕ್ಷ ನೆರವು ನೀಡುತ್ತಿದ್ದೆನೆ. ಇದರಲ್ಲಿಯಾವುದೆ ದುರುದ್ದೇಶ ಅಡಗಿಲ್ಲ, ಇದೊಂದು ನನ್ನ ಕೈಲಾದ ಸಣ್ಣ ಸಹಾಯ ಎಂದು ಅರಿತಿದ್ದೆನೆ, ಇಂತಹ ಕೆಲಸವನ್ನು ನಾನು ಪುಣ್ಯದ ಕೆಲಸ ಎಂದೆ ಭಾವಿಸಿದ್ದೆನೆ ಎಂದರು.  ಈಸಂದಭ೯ದಲ್ಲಿ  ಕಾಯ೯ಕ್ರಮದಲ್ಲಿ ಹಾಲು ಮತ ಮಹಾಸಭಾದ ರಾಜ್ಯ ಸಂಚಾಲಕ ವೆಂಕಟೇಶಮೂತಿ೯, ಮುಖಂಡರುಗಳಾದ ಆನಂದೆಗೌಡ,  ರಮೇಶ್ ಗೌಡ, ಜಿಲ್ಲಾಧ್ಯಕ್ಷ ಕಾಮರಾಜು, ಜಿನಕನಹಳ್ಳಿ ಶ್ರೀನಿವಾಸ್, ಕೖಷ್ಣ, ಸಿದ್ದರಾಜು, ಮೇರಿ, ಆಂಥೋನಿ, ಸಂತ್ಯಾಗೋ , ಇನ್ನಿತರರು ಇದ್ದರು..

LEAVE A REPLY

Please enter your comment!
Please enter your name here