ಉಪವಿಭಾಗಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ.

0
183

ಬಳ್ಳಾರಿ / ಹೊಸಪೇಟೆ:ಸಂಪ್ರದಾಯಕ ಮರಳು ಗಣಿಗಾರಿಕೆಗೆ ಅವಕಾಶ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣಕಾರ್ಮಿಕರ ಫೆಡರೇಷನ್ ನೇತೃತ್ವದಲ್ಲಿ ನೂರಾರು ಕಟ್ಟಡ ಕಾರ್ಮಿಕರು, ಉಪವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಶ್ರಮಿಕ ಭವನದಿಂದ ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿದ ಪ್ರತಿಭಟನಾಕಾರರು, ಮರಳು ಕಾಳಸಂತೆ ಕೋರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಕಟ್ಟಡ ಕಾರ್ಮಿಕ ಮುಖಂಡ ಯಲ್ಲಾಲಿಂಗ ಮಾತನಾಡಿ, ಮರಳು ಮತ್ತು ಕಪ್ಪು ಕಲ್ಲುಗಳನ್ನು ಸರ್ಕಾರ ರಿಯಾಯಿತಿ ಧರದಲ್ಲಿ ನೀಡುವುದರ ಜೊತೆಯಲ್ಲಿ ಸಿಮೆಂಟ್, ಕಬ್ಬಿಣ, ಬಣ್ಣ ಮತ್ತು ಇಟ್ಟಿಗೆ ಬೆಲೆಯನ್ನು ನಿಯಂತ್ರಿಸಬೇಕು. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರರಿಗೆ ತಿಂಗಳಿಗೆ 18ಸಾವಿರ ಕನಿಷ್ಟ ಕೂಲಿ ನೀಡಬೇಕು. ಮನೆ ಖರೀದಿ ಮತ್ತು ನಿರ್ಮಾಣಕ್ಕೆ ಫಲಾನುಭವಿಗೆ ಸಹಾಯಧನ ನೀಡಿವುದು ಮತ್ತು ಹೆಚ್ಚುವರಿ ಬಡ್ಡಿಯನ್ನು ಮಂಡಳಿಯಿಂದ ಭರಿಸಲು ಕ್ರಮವಹಿಸಬೇಕು.

ಕಲ್ಯಾಣ ಮಂಡಳಿಯಲ್ಲಿ ಜಮಾಗೊಂಡಿರುವ ನಿಧಿ (ಸೆಸ್)ಯನ್ನು ಕಟ್ಟಡ ಕಾರ್ಮಿಕರ ವಿವಿಧ ಸೌಲಭ್ಯಗಳಿಗೆ ಮಾತ್ರ ಉಪಯೋಗಿಸಬೇಕು. ಬಾಕಿ ಇರುವ ವಿವಾಹ, ಮರಣ ಅನುಗ್ರಹ ರಾಶಿ, ವೈದ್ಯಕೀಯ ಸೌಲಭ್ಯದ ಹಣವನ್ನು ಯಾವುದೇ ಷರತ್ತುಗಳು ಇಲ್ಲದೇ ಮಾನವೀಯತೆಯ ಆಧಾರದಲ್ಲಿ 2017ರ ಡಿಸೆಂಬರ್ ಒಳಗೆ ತಪ್ಪದೇ ವಿಲೇವಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕ ಮುಖಂಡ ಆರ್.ಭಾಸ್ಕರೆಡ್ಡಿ ಮಾತನಾಡಿ, ಅಂಗವಿಕಲತೆ, ಪಿಂಚಣಿ, ಕ್ಷಯಾರೋಗ, ಕ್ಯಾನ್ಸರ್, ಪಾರ್ಶ್ವವಾಯು, ಟಿ.ಬಿ.ಕಾಯಿಲೆಗಳಿಂದ ಶಾಶ್ವತ ಅಂಗವಿಕಲತೆ ಹೊಂದಿದ ಫಲಾನುಭವಿಗಳಿಗೆ ಮಾಸಿಕ 2ಸಾವಿರ ಪಿಂಚಣಿ ಹಾಗೂ ಅಂಗವಿಕಲತೆ ಪ್ರಮಾಣವನ್ನು ಆಧರಿಸಿ 10ಸಾವಿರ ವರೆಗೆ ಎಕ್ಸ್‌ಗ್ರೇಸಿಯಾ ಧನ ಸಹಾಯ ನೀಡಬೇಕು. ನೊಂದಾಯಿತರಲ್ಲದ ನಿರ್ಮಾಣ ಕಾರ್ಮಿಕರಿಗೆ ಎಕ್ಸ್‌ಗ್ರೇಸಿಯಾ ನಿರ್ಮಾಣ ಹಂತದ ಯಾವುದೇ ವಿದದಲ್ಲಾಗಲಿ ಕಟ್ಟಡ ಕುಸಿತದಿಂದ ಅಫಘಾತ ಉಂಟಾಗಿ ಮೃತರಾದಲ್ಲಿ ಅವರ ಕುಟುಂಬಕ್ಕೆ ಮತ್ತು ಗಂಭೀರವಾಗಿ ಗಾಯಗೊಂಡ ಕಟ್ಟಡ ಕಾರ್ಮಿಕರಿಗೆ 1ಲಕ್ಷ ರೂ. ನೀಡಬೇಕು. ಎಲ್ಲಾ ಕಟ್ಟಡ ಕಾರ್ಮಿಕರಿಗೆ ಉಚಿತ ವಸತಿ ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಮುಖಂಡ ಎಂ.ಗೋಪಾಲ ಮಾತನಾಡಿ, ನಗರದ 100 ಹಾಸಿಗೆ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆ(200 ಹಾಸಿಗೆ)ಗೆ ಏರಿಸಬೇಕು. ಖಾಲಿ ಇರುವ ವೈದ್ಯರನ್ನು ಭರ್ತಿ ಮಾಡಬೇಕು. ಖಾಸಗಿ ಆಸ್ಪತ್ರೆಗಳ ಹಣ ವಸೂಲಿಯನ್ನು ತಡೆಗಾಗಿ ವೈದ್ಯರ ಸಭೆ ನಡೆಸಿ, ಕಡಿವಾಣ ಹಾಕಬೇಕು. ನಗರಸಭೆಯಲ್ಲಿ ತ್ವರಿತ ಕಡತ ವಿಲೇವಾರಿ ಮಾಡಬೇಕು. ನಗರದಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಯೋಗ್ಯವೆಂದು ಪರಿಶೀಲಿಸಿ ನೀರನ್ನು ಒದಗಿಸುವಂತೆ ಸೂಕ್ತ ಸಲಹೆ ನೀಡಬೇಕು ಎಂದು ಒತ್ತಾಯಿಸಿದರು.

LEAVE A REPLY

Please enter your comment!
Please enter your name here