ಉರುಳಿ ಬಿದ್ದ ಮಿನಿಬಸ್..

0
155

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿ ಗಾರ್ಮೆಂಟ್ಸ್ ಮಿನಿಬಸ್ ಉರುಳಿ ಬಿದ್ದ ಘಟನೆ ತಾಲೂಕಿನ ಕನಕೇನಹಳ್ಳಿ ಬಳಿ ನಡೆದಿದೆ.

ಮಿನಿ ಬಸ್ ಉರುಳಿ ಬಿದ್ದ ಪರಿಣಾಮ ಮಿನಿ ಬಸ್ ನಲ್ಲಿದ್ದ 10 ಜನ ಗಂಭೀರವಾಗಿ ಗಾಯ ಗೊಂಡಿದ್ದು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಂತಾಜನಕ ಸ್ಥಿತಿ ಯಲ್ಲಿದ್ದ ಗಾಯಾಳುಗಳನ್ನ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಸಿಲ್ವರ್ಸ್ ಪಾರ್ಕ್ ಗಾರ್ಮೆಂಟ್ಸ್ ಸೇರಿದ ಮಿನಿ ಬಸ್ ಇದಾಗಿದ್ದು 60ಕ್ಕೂ ಹೆಚ್ಚುಜನ ಮಿನಿಬಸ್ ನಲ್ಲಿದ್ದ ಕಾರಣ ಬಸ್ ಉರುಳಿ ಬಿದ್ದಿದೆ. ಅಲ್ಲದೆ ಹಳೆ ವಾಹನಗಳನ್ನು ಬಳಸಿರುವುದು ಕೊಡಾ ಘಟನೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಗಾಯಾಳುಗಳು ಸಿಲ್ವರ್ ಪಾರ್ಕ್ ಗಾರ್ಮೆಂಟ್ಸ್ ನ ಕಾರ್ಮಿಕರಾಗಿದ್ದು ಘಟನೆ ನಡೆದ್ರು ಇಲ್ಲಿಯ ವರೆಗೂ
ಗಾರ್ಮೆಂಟ್ಸ್ ಆಡಳಿತದ ಯಾವುದೇ‌ ಅಧಿಕಾರಿ ಭೇಟಿ ನೀಡಿಲ್ಲ. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ರು ಗಾರ್ಮೆಂಟ್ಸ್ ಮಾಲೀಕರು ಯಾವುದೇ ಕ್ರಮ ಕೈಗೊಂಡಿಲ್ಲ . ಕೇವಲ ಹಣ ಮಾಡುವುದನ್ನೇ ವೃತ್ತಿ ಮಾಡಿಕೊಂಡಿರುವ ಮಾಲೀಕರು ಕಾರ್ಮಿಕರ ಯೋಗ ಕ್ಷೇಮದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಆಡಳಿತ ಮತ್ತು ಜವಾಬ್ದಾರಿ ಮರೆತ ನಿರ್ಲಕ್ಷದ ಕಾರ್ಮಿಕ ಇಲಾಖೆ ಅಧಿಕಾರಿಗಳ ವಿರುದ್ದ ಗಾಯಾಳು ಸಂಬಂಧಿಗಳು ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here