ಎಂ.ಇ.ಪಿ. ಅಭ್ಯರ್ಥಿಯ ನಾಮ ಪತ್ರ ಸಲ್ಲಿಕೆ.

0
123

ಬೆಂಗಳೂರು/ಮಹದೇವಪುರ:– ಕ್ಷೇತ್ರದ ಜನತೆಗೆ ಮೂಲ ಸೌಲಭ್ಯ ಒದಗಿಸುವುದರ ಜೊತೆಗೆ ಮಹಿಳೆಯರಿಗೆ ಎಲ್ಲಾ ರೀತಿಯಲ್ಲಿ ನ್ಯಾಯ ದೊರಕಿಸಿಕೂಡಲು ಹೋರಾಟ ನಡೆಸಲು ಆರಂಭಿಸಿರುವ ಎಂ.ಇ.ಪಿ ಪಕ್ಷದಲ್ಲಿ ಆಯ್ಕೆಯಾಗಿ ಮಹದೇವಪುರ ವಿಧಾನ ಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದಾಗಿ ನಂದಕುಮಾರ್ ತಿಳಿಸಿದರು. ಬೆಂಗಳೂರು ಪೂರ್ವ ತಾಲ್ಲುಕು ಕಛೇರಿಯಲ್ಲಿ ಎಂ.ಇ.ಪಿ. ಪಕ್ಷದ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿ ಅವರು ಮಾತನಾಡಿದರು. ಇಂದಿನ ಯುಗದಲ್ಲಿ ಮಹಿಳೆಯರು 12 ಘಂಟೆ ರಾತ್ರಿಯಲ್ಲಿ ನಿರ್ಬಯದಿಂದ ಸಂಚರಿಸಿದರೆ ರಾಮರಾಜ್ಯವಾಗುತ್ತದೆ ಎಂದು ಕಥೆಗಳಲ್ಲಿ ಹೇಳುತ್ತಾರೆ ಆದರೆ ಇಂದು ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಲು ಹುಟ್ಟಿಕೊಂಡಿರುವ ಪಕ್ಷ ಎಂ.ಇ.ಪಿ.ಯಾಗಿದೆ ಎಂದರು. ಕ್ಷೇತ್ರದ ಜನತೆಗೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಮೊದಲ ಆದ್ಯತೆ ನಿಡಲಾಗುವುದೆಂದರು. ರಾಜ್ಯದಲ್ಲಿ ಸುಮಾರು ಜಾಗದಲ್ಲಿ ಎಂ.ಇ.ಪಿ.ಪಕ್ಷ ಸ್ವದರ್ೆಮಾಡುತ್ತಿದ್ದು ಜನರಲ್ಲಿ ಹೊಸ ಸಂಚಲನ ಮೂಡಿಸಲಾಗುವುದೆಂದರು. ಯಾವುದೆ ಸರ್ಕಾರ ಬಂದರೂ ಬಡವರಿಗೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು. ನಮ್ಮ ಪಕ್ಷ ಆರಿಸಿ ಬಂದರೆ ಬಡವ ಮತ್ತು ಶ್ರೀಮಂತರಲ್ಲಿರುವ ತಾರತಮ್ಯ ಹೋಗಲಾಡಿಸುವುದೆಂದರು. ಇದೆ ಕ್ಷೇತ್ರದ ಸ್ಥಳೀಯ ಅಭ್ಯರ್ಥಿಯಾಗಿ ನನಗೆ ತಾವೆಲ್ಲರೂ ಆಶೀರ್ವಾದ ಮಾಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಬದಲ್ಲಿ ಪ್ರಸಾದ್, ಮಾಂತೇಶ್, ಮಂಜೂ, ಮನುಕುಮಾರ್, ಸಂತೋಷ್, ಆಶಿಪ್ ಅರಿದ್, ಹೆಚ್.ಎಂ.ನಾಗರಾಜು, ಮಂಜೂಗೌಡ, ವಿಕ್ರಮ್ ಮುಂತಾದವರು ಪಾಲ್ಗೊಂಡರು.

LEAVE A REPLY

Please enter your comment!
Please enter your name here