ಎಎಸ್ಐ ಎಣ್ಣೆ ಅವಾಂತರ

0
173

ಬಳ್ಳಾರಿ /ಹಗರಿಬೊಮ್ಮನ ಹಳ್ಳಿ:ಪೊಲೀಸರು ಸಮವಸ್ತ್ರದಲ್ಲಿ ಕಾನೂನು ಬಾಹಿರ ಕೆಲಸ ಮಾಡಬಾರದು ಅನ್ನೋ ನಿಯಮವಿದೆ. ಆದ್ರೆ ಎಎಸ್ಐಯೊಬ್ಬರು ಪೊಲೀಸ್ ಸಮವಸ್ತ್ರದಲ್ಲೆ ಇದ್ದಾಗ ದಾಬಾಗೆ ನುಗ್ಗಿ ಎಣ್ಷೆ ಹೊಡೆದ ಪ್ರಕರಣ ಇದೀಗ ಬಯಲಾಗಿದೆ, ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯ ಎಎಸ್ಐ ಮೋಹನಕುಮಾರ ಕಳೆದ ರಾತ್ರಿ ಹಗರಿಬೊಮ್ಮನ ಹಳ್ಳಿ ಹೊರವಲಯದ ದಾಬಾ ಪರಿಶೀಲನೆ ಮಾಡೋ ನೆಪದಲ್ಲಿ ಅಡುಗೆ ಮನೆಗೆ ನುಗ್ಗಿ ಅಲ್ಲೆ ಗಡದ್ದಾಗಿ ಕಂಠಪೂರ್ತಿ ಕುಡಿದಿರುವ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಎಎಸ್ಐ ಮೋಹನಕುಮಾರ ದಾಬಾ ಹೊಟೇಲ್ ಮೇಲೆ ಕೇಸ ಮಾಡೋದಾಗಿ ಬೆದರಿಸಿ ಅವರಿಂದಲೇ ಎಣ್ಣೆ ತರಿಸಿಕೊಂಡು ಸಮವಸ್ತ್ರದಲ್ಲೆ ಎಣ್ಣೆ ಎರಿಸುವುದು ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದ್ರೂ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸವಾಗಿದೆ. ಅಲ್ಲದೇ ಮೋಹನಕುಮಾರ ವಿಧವೆಯೊಬ್ಬರಿಗೆ ಲೈಂಗಿಜ ಕಿರುಕುಳ ನೀಡಿರುವುದು ಸಹ ಇದೀಗ ಹಗರಿಬೊಮ್ಮನಹಳ್ಳಿ ಪೊಲೀಸ ಅಧಿಕಾರಿಗಳ ಮಾನ ಮೆರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದಂತಾಗಿದೆ‌. ಸಮವಸ್ತ್ರದಲ್ಲೆ ಎಎಸ್ಐ ಹೇಗೆ ಎಣ್ಣೆ ಹೊಡಿತಾರೆ ನೋಡಿ.

LEAVE A REPLY

Please enter your comment!
Please enter your name here