ಎಕ್ಸಾಂ ಪ್ರಿಪರೇಶನ್, ಎವಿಬಿಬಿ

0
179

ಬೆಂ,ಗ್ರಾಮಾಂತರ/ಹೊಸಕೋಟೆ: ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯವನ್ನು ಹೋಗಲಾಡಿಸಲು ಮುಂದಾದ ತುಳಸಿ ಸೇವ ಸಮಾಜ ಟ್ರಸ್ಟ್  ಇದೇ ತಿಂಗಳ 30 ರಿಂದ ರಾಜ್ಯಾದ್ಯಂತ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಪ್ರಾರಂಭವಾಗುತ್ತಿದ್ದು ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯವನ್ನು ಹೋಗಲಾಡಿಸುವ ಸಲುವಾಗಿ ತುಳಸಿ ಸಮಾಜ ಸೇವಾ ಟ್ರಸ್ಟ್ ಮುಂದಾಗಿದೆ. ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ದೇವಲಾಪುರ, ದುನ್ನಸಂದ್ರ ಸೇರಿದಂತೆ ಅನೇಕ ಶಾಲೆಯಳಲ್ಲಿ ಪರೀಕ್ಷೆಗು ಮುಂಚೆ 3 ತಿಂಗಲುಗಳಿಂದ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ದಪಡಿಸುವ ಕಾರ್ಯವನ್ನು ಕಳೆದ ಆರು ವರ್ಷಗಳಿಂದ ಮಾಡಿಕೊಂಡು ಬಂದಿದೆ. ಕಳೆದ ಆರುವರ್ಷಗಳಿಂದ ಸಾವಿರಕ್ಕು ಹೆಚ್ಚು ವಿದ್ಯಾರ್ಥಿಗಳಲ್ಲಿ ದೈರ್ಯ ತುಂಬುವ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅಣಿಗೊಳಿಸುವ ಮೂಲಕ ವಿದ್ಯಾರ್ಥಿಗಳ ಉತ್ತಮ ಪಲಿತಾಂಶಕ್ಕೆ ಈ ಸಂಘ ಕಾರಣವಾಗಿದೆ. ಇನ್ನು ಈ ವರ್ಷವು ಸಯ ದೇವಲಾಪುರ ಸೇರಿದಂತೆ ಹಲವು ಸಕರ್ಾರಿ ಶಾಲೆಗಳಲ್ಲಿ ಕಳೆದ ಮೂರು ತಿಂಗಳುಗಳಿಂದ ತರಗತಿಗಳನ್ನು ನಡೆಸಿಕೊಂಡು ಬಂದಿದ್ದು ಇಂದು ವಿದ್ಯಾಥರ್ಿಗಳಿಗೆ ಪರೀಕ್ಷೆ ಮುಕ್ತಾಯ ಸಮಾರೋಪ ಸಮಾರಂಭವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದ ಬಗ್ಗೆ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಕಳೆದ ಭಾರಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಉಂಗುರವನ್ನು ಬಹುಮಾನವಾಗಿ ನೀಡುವ ಮೂಲಕ ಪ್ರೊತ್ಸಾಹಿಸಲಾಯಿತು.

LEAVE A REPLY

Please enter your comment!
Please enter your name here