ವರದಿಗೆ ಎಚ್ಚೆತ್ತು, ಕ್ರಮಕ್ಕೆ ಮುಂದಾದ ತುಂಗಭದ್ರಾ ಮಂಡಳಿ

0
291

ಬಳ್ಳಾರಿ /ಹೊಸಪೇಟೆ:ತುಂಗಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಎಲ್‌ಎನ್‌ಟಿ ಕಂಪನಿ ಹಾಕಲಾಗಿದ್ದ ಕಟ್ಟಡದ ಅವಶೇಷಗಳ ನಿರುಪಯುಕ್ತ ವಸ್ತು ಹಾಗೂ ಮಣ್ಣನ್ನು ತೆರುವುಗೊಳಿಸಲು ತುಂಗಭದ್ರಾ ಮಂಡಳಿ ಗುರುವಾರ ಮುಂದಾಗಿದೆ.

ಹೊಸಪೇಟೆಯಿಂದ ಚಿತ್ರದುರ್ಗದವರೆ ರಾಷ್ಟ್ರೀಯ ಹೆದ್ದಾರಿ 13 ರಸ್ತೆ ವಿಸ್ತರಣೆ ಕಾಮಗಾರಿ ನಡೆಸುವ ವೇಳೆಯಲ್ಲಿ ವ್ಯಾಸನಕೇರಿ ಗ್ರಾಮದ ರಸ್ತೆ ಬದಿಯಲ್ಲಿದ್ದ ಕಟ್ಟಡಗಳನ್ನು ನೆಲಸಮಗೊಳಿಸಿ, ಅವಶೇಷ ಹಾಗೂ ಕಲ್ಲು-ಮಣ್ಣನ್ನು ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಹಾಕಿತ್ತು. ಇದನ್ನು ಕಂಡ ಅಖಲ ಕನಾ೯ಟಕ ವಾಲ್ಮೀಕಿ ನಾಯಕ ಮಾಹ ಸಭಾ ಆಕ್ರೋಶ . ವ್ಯಕ್ತ ಪಡಿಸಿತ್ತು ಈ ನಡುವೆ ದಿನಾಂಕ 18.4.17 ರಂದು ನಮ್ಮೂರು ಟೀವಿಯಲ್ಲಿ ವರದಿ ಪ್ರಕಟಿಸಿತ್ತು. ವರದಿಗೆ ಎಚ್ಚೆತ್ತುಕೊಂಡ ತುಂಗಭದ್ರಾ ಮಂಡಳಿ, ಎಲ್‌ಎನ್‌ಟಿ ಕಂಪನಿ ವಿರುದ್ಧ ಕ್ರಮಕ್ಕೆ ಮುಂದಾದ ಹಿನ್ನಲೆಯಲ್ಲಿ ಎಲ್‌ಎನ್‌ಟಿ ಕಂಪನಿ ಜಲಾಶಯದಲ್ಲಿ ಸುರಿದಿದ್ದ ನೂರಾರು ಟಿಪ್ಪರ್ ಲಾರಿ ಮಣ್ಣನ್ನು ಹೊರ ಸಾಗಿಸಲು ಮುಂದಾಗಿದೆ. ಇದು ನಮ್ಮೂರು ಟಿವಿ ವರದಿಯ ಫಲಶ್ರುತಿಯಾಗಿದೆ.

LEAVE A REPLY

Please enter your comment!
Please enter your name here