ಎರಡು ಶತಮಾನಗಳ ಸಂಭ್ರಮ ಕಾರ್ಯಕ್ರಮ ಕುರಿತು ಸುದ್ದಿಗೋಷ್ಠಿ.

0
347

*ಫಾದರ್ ವೈ ಎಸ್ ಪೀಟರ್ ಹೇಳಿಕೆ*
ಬಳ್ಳಾರಿ /ಬಳ್ಳಾರಿ
ಕ್ರೈಸ್ತ್ ದ ಕಿಂಗ್ ಚರ್ಚು 1815 – 16 ರಲ್ಲಿ ಬಳ್ಳಾರಿಯಲ್ಲಿ ನಾಲ್ಕು ಸಾವಿರ ರೂಪಾಯಿಗಳ ಖರ್ಚಿನಲ್ಲಿ ರೆವರೆಂಡ್ ಫಾದರ್ ದಿನಾನ್ ನೇತೃತ್ವದಲ್ಲಿ ನಿರ್ಮಾಣ ಮಾಡಲಾಯಿತು, ಕಳೆದ ಎರಡು ನೂರು ವರ್ಷಗಳಿಂದ ಕ್ಯಾಥೋಲಿಕ್ ಪರಂಪರೆಯ ಮೂಲಕ ಧಾರ್ಮಿಕ ಚಟುವಟಿಕೆ ನಡೆದ ಈ ಚರ್ಚು ಈಗ ಎರಡು ಶತಮಾನಗಳ ಸಂಭ್ರದಮದಲ್ಲಿದೆ ಎಂದು ಫಾದರ್ ವೈ ಎಸ್ ಪೀಟರ್ ಹೇಳಿದರು.

ಅವರು ಕ್ರೈಸ್ಟ್ ದ ಕಿಂಗ್ ಚರ್ಚು ಎರಡು ಶತಮಾನಗಳ ಸಂಭ್ರಮ ಕಾರ್ಯಕ್ರಮ ಕುರಿತು ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಇದೇ ಜೂನ್ 18 ರಂದು ಎರಡು ಶತಮಾನಗಳ ಸಂಭ್ರಮಾಚರಣೆಯನ್ನು ಸುಧಾ ಕ್ರಾಸ್ ಬಳಿಯಿರುವ ಕ್ರೈಸ್ಟ್ ದ ಕಿಂಗ್ ಚರ್ಚ್ ಆವರಣದಲ್ಲಿ ಆಚರಿಸಲಾಗವುದು ಎಂದು ಹೇಳಿದರು.

ಹಾನಿಗೀಡಾಗಿದ್ದ ಚರ್ಚನ್ನು ನವೀಕರಣ ಮಾಡಲು ಅಲ್ಪಸಂಖ್ಯಾತ ಆಯೋಗದಿಂದ ಐವತ್ತು ಲಕ್ಷ ರೂಪಾಯಿ ಅನುದಾನ ಬಂದಿದೆ. ಇದರ ಹೊರತಾಗಿ ಕೆಲ ಜನಪ್ರತಿನಿಧಿಗಳು ತಮ್ಮ ಅನುದಾನದಲ್ಲಿ ಹಣ ನೀಡುವ ಭರವಸೆ ನೀಡಿದ್ದಾರೆಂದರು.

ಜೂನ್ 18ರಂದು ನಡೆಯುವ ಕಾರ್ಯಕ್ರಮದಲ್ಲಿ ಬಳ್ಳಾರಿ ಬಿಷಪ್ ಡಾ. ಹೆನ್ರಿ ಡಿಸೋಜಾ, ಮೈಸೂರಿನ ಬಿಷಪ್ ಡಾ. ಕೆ ಎ ವಿಲಿಯಂ, ಸಂಸದ ಆಸ್ಕರ್ ಫರ್ನಾಂಡೀಸ್, ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಜೆ ಆರ್ ಲೋಬೊ, ಕರ್ನಾಟಕ ರಾಜ್ಯ ಮುಖ್ಯ ಸಚೇತಕ ಐವಾನ್ ಡಿಸೋಜಾ, ಸಂಸದ ಶ್ರೀರಾಮುಲು, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಭಾಗವಹಿಸಲಿದ್ದಾರೆ ಎಂದರು.

ಫಾದರ್ ಜ್ಞಾನ ಪ್ರಕಾಶ್, ಕಾಂಗ್ರೆಸ್ ಮುಖಂಡ ಗುಡ್ಲೂರು ರವಿ ಹಾಜರಿದ್ದರು.

LEAVE A REPLY

Please enter your comment!
Please enter your name here