ಎಸಿಬಿ ಬಲೆಗೆ ಬಿದ್ದ ಜೆಸ್ಕಾಂ ಎಇಇ

0
305

ರಾಯಚೂರು: ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದ ಜೆಸ್ಕಾಂ ಎಇಇ.

ನಗರದ ಸ್ಟೇಷನ್ ರಸ್ತೆಯಲ್ಲಿರುವ ಜೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರ ಹಾಗೂ ಕಾರ್ಯಪಾಲನೆಯ ನಗರ ವಿಭಾಗ ಕಚೇರಿಯ ಎಇಇ ಶಿವನಗುತ್ತಿ ಇಪ್ಪತ್ತೈದು ಸಾವಿರ(೨೫ )ಲಂಚ ಸ್ವೀಕರಿಸುವ ವೇಳೆ ಎಸಿಬಿ ದಾಳಿಗೆ ಒಳಗಾಗಿದ್ದಾರೆ.

ಮನೆಯ ಕಟ್ಟಡಕ್ಕ ವಿದ್ಯುತ್ ಸಂಪರ್ಕ ಒದಗಿಸಲು ಶ್ರೀರಾಮನಗರದ ನಿವಾಸಿ ಬಸವರಾಜ ಅರ್ಜಿ ಸಲ್ಲಿಸಿದ್ರು. ನಿಯಮಾನುಸಾರ ಅರ್ಜಿದಾರನಿಗೆ ವಿದ್ಯುತ್ ಸಂಪರ್ಕ ಒದಗಿಸಬೇಕು. ಆದ್ರೆ ಎಇಇ ಲಂಚದ ಬೇಡಿಕೆ ಇಟ್ಟಿದ್ದ. ಇದರಿಂದ ರೋಸಿ ಹೋದ ಬಸವರಾಜ್ ಎಸಿಬಿ ದೂರು ಸಲ್ಲಿಸಿದ್ರು. ಇಂದು ಕಚೇರಿಯಲ್ಲಿ ಎಇಇ ಶಿವನಗುತ್ತಿ ಬಸವರಾಜ್ ನಿಂದ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಳ್ಳಾರಿ ಡಿವೈಎಸ್ಪಿ ಅರುಣ್ ಕುಮಾರ್ ಹಾಗೂ ರಾಯಚೂರು ಎಸಿಬಿ ಇನ್ಸ್‌ಪೆಕ್ಟರ್ ಶ್ರೀಧರ ದೊಡ್ಡಿ ನೇತೃತ್ವದಲ್ಲಿ ದಾಳಿ ನಡೆಸಿ ಲಂಚಬಾಕ ಎಇಇಯನ್ನ ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here