ಎಸಿಬಿ ಬಲೆಗೆ ಬಿದ್ದ ನಗರಸಭೆ ಅಧಿಕಾರಿ

0
205

ಬೀದರ್/ಬಸವಕಲ್ಯಾಣ: ತಾತ್ಕಾಲಿಕ ಸೇಡ್ ನಿರ್ಮಾಣ ಸಂಬಂಧ ಅನುಮತಿ ನೀಡಲು ವ್ಯಕ್ತಿಯೊಬ್ಬರಿಂದ 20 ಸಾವಿರ ರೂ. ಲಂಚ ಸ್ವೀಕರಿಸುತಿದ್ದ ಇಲ್ಲಿಯ ನಗರ ಸಭೆ ನೈರ್ಮಲ್ಯ ನಿರೀಕ್ಷಕ ಝರಣಪ್ಪ ರಾಸೂರೆ ಎನ್ನುವನ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಲಂಚದ ಹಣ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
ಮಂಗಳವಾರ ಸಂಜೆ ನಗರ ಸಭೆ ಅಧಿಕಾರಿ ಝರಣಪ್ಪ ನಗರಕ್ಕೆ ಹೊಂದಿಕೊಂಡಿರುವ ಹುಲಸೂರ ರಸ್ತೆಯಲ್ಲಿರುವ ತಮ್ಮ ಹೊಲದಲ್ಲಿ ನಗರದ ರಾಮ್ ಬುಯ್ಯೆ ಎನ್ನವರಿಂದ ಲಂಚದ ಹಣ ಸ್ವೀಕರಿಸುತಿದ್ದಾಗ ಎಸಿಬಿ ಅಧಿಕಾರಿಗಳು ಬಿಸಿದ ಬಲೆಗೆ ಬಿದ್ದಿದ್ದಾನೆ.
ಮಹಿಳೆಯೊಬ್ಬರಿಂದ ಲೀಸ್ ಮೇಲೆ ಸ್ಥಳ ಪಡೆದು ಹೊಟೇಲ್ಗಾಗಿ ಸೇಡ್ ನಿಮರ್ಾಣಕ್ಕೆ ಕಳೆದ ಮೇ.4ರಂದು ಅನುಮತಿಗಾಗಿ ಇಲ್ಲಿಯ ನರ ಸಭೆಗೆ ಅರ್ಜಿಸಲ್ಲಿಸಲಾಗಿತ್ತು. ಅನುಮತಿ ನೀಡಲು ನಾಲ್ಕು ತಿಂಗಳಿಂದ ಸತಾಯಿಸಿದ ಅಧಿಕಾರಿ, 20 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದ. ಈ ಕುರಿತು ಬೀದರ್ ಎಸಿಬಿ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಎಸಿಬಿ ಡಿವೈಎಸ್ಪಿ ವಿಶ್ವನಾಥ ಕುಲ್ಕರ್ಣಿಯವರ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿತ ಝರಣಪ್ಪನನ್ನು ಬಂಧಿಸಿದ್ದಾರೆ.
ಎಸಿಬಿ ಸಿಬ್ಬಂದಿಗಾಳದ ರಮೇಶ, ಶ್ರೀಕಾಂತ, ಅನೀಲ, ರಾಘವೇಂದ್ರ, ಶಿವರಾಜ ಹಾಗೂ ವಂಸತ ದಾಳಿಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here