ಕತ್ತಲೆಯಲ್ಲಿ ಕಾರ್ಮಿಕರ ಬದುಕು

0
218

ಬಳ್ಳಾರಿ ಹೊಸಪೇಟೆ:ಚಿತ್ತವಾಡ್ಗಿ ಐಎಸ್‌ಆರ್ ಸಕ್ಕರೆ ಕಾರ್ಖಾನೆ ವಿದ್ಯುತ್ ಬಾಕಿ ಹಣ ಉಳಿಸಿಕೊಂಡ ಪರಿಣಾವಾಗಿ ಐಎಸ್‌ಆರ್ ಕಾಲೋನಿ ನೌಕರರು, ಕಳೆದ ಒಂದು ವಾರದಿಂದ ಕತ್ತಲ್ಲಲ್ಲಿ ಕಾಲ ಕಳೆದಂತ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಐಎಸ್‌ಆರ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ, ಜೆಸ್ಕಾಂ ಇಲಾಖೆಗೆ ಪಾವತಿ ಮಾಡಬೇಕಾದ 12 ಲಕ್ಷ ರೂ. ವಿದ್ಯುತ್ ಬಾಕಿಯನ್ನು ಉಳಿಸಿಕೊಂಡ ಹಿನ್ನಲೆಯಲ್ಲಿ ಐಎಸ್‌ಆರ್ ಕಾಲೋನಿ ನೌಕರರ ಮನೆಗಳಿಗೆ ಜೆಸ್ಕಾಂ ಇಲಾಖೆ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದು, ಕಾಲೋನಿಯ ಸುಮಾರು 75 ನೌಕರರ ಕುಟುಂಬಗಳು ಕತ್ತಲಿನಲ್ಲಿ ಕಾಲ ಕಳೆಯುಂತ ಪರಿಸ್ಥತಿ ನಿರ್ಮಾಣವಾಗಿದೆ.ಕಾರ್ಖಾನೆ ಆಡಳಿತ ಮಂಡಳಿ, ಈ ಮನೆಗಳಿಗೆ ವಿದ್ಯುತ್‌ನ್ನು ಸ್ಥಗಿತ ಮಾಡದಿರಲು ತಡೆಯಾಜ್ಞೆ ಕೋರಿ, ಸ್ಥಳೀಯ ನ್ಯಾಯಾಲಯಕ್ಕೆ ಮೊರೆ ಹೋಗಿದ್ದು, ನ್ಯಾಯಾಲಯ, ವಿದ್ಯುತ್ ಸಂಪರ್ಕ ಕಡಿತ ಮಾಡದಂತೆ ಜೆಸ್ಕಾಂ ಇಲಾಖೆಗೆ ಆದೇಶ ನೀಡಿದೆ. ಇದನ್ನು ಪ್ರಶ್ನಿಸಿ, ಜೆಸ್ಕಾಂ ಇಲಾಖೆ, ಜಿಲ್ಲಾ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದೆ. ಹೀಗಾಗಿ ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಭಮತೆ ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಜೆಸ್ಕಾಂ ಇಲಾಖೆ ಅಗ್ಗಜಗ್ಗಾಟದಲ್ಲಿ ಕಾಲೋನಿಯ ಜನರು, ಕತ್ತಲಲ್ಲೇ ಜೀವನ ಸಾಗಿಸುವಂತಾಗಿದೆ.ವಿದ್ಯುತ್ ಬಾಕಿ ಉಳಿಸಿಕೊಂಡದ್ದರಿಂದ ಐಎಸ್‌ಆರ್ ಕಾಲೋನಿ ನೌಕರರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ. ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಅನೇಕ ಬಾರಿ ಕಾರ್ಖಾನೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಅನಿವಾರ‌್ಯವಾಗಿ ವಿದ್ಯುತ್ ಸಂಪರ್ಕ ಕಡಿತ ಮಾಡಬೇಕಾಯಿತು ಎಂದು ಜೆಸ್ಕಾಂ ಸಹಾಯಕ ಇಂಜಿಯರ್ ಮೇಟಿ ಹನುಮಂತಪ್ಪ ತಿಳಿಸಿದ್ದಾರೆ.ಐಎಸ್‌ಆರ್ ಸಕ್ಕರೆ ಕಾರ್ಖಾನೆ ನೌಕರರ ಸಂಘದ ಮುಖಂಡರಾದ ಈಶ್ವರ್ ಹಾಗೂ ಮನೋಹರ್ ಸಿಂಗ್ ಮಾತನಾಡಿ,  ಕಾರ್ಖಾನೆ ಆಡಳಿತ ಮಂಡಳಿಯು ಕಳೆದ 10 ತಿಂಗಳಿಂದ ನಮಗೆ ವೇತನ ನೀಡಿಲ್ಲ, ನೌಕರರ ಕಾಲೋನಿಯು ಕಾರ್ಖಾನೆಗೆ ಸಂಬಂಧಿಸಿದ್ದಾಗಿದ್ದು, ಮನೆ ಬಾಡಿಗೆ ಮತ್ತು ವಿದ್ಯುತ್ ಬಿಲ್‌ನ್ನು ಕಂಪನಿಯವರು ನಮ್ಮ ಸಂಬಳದಲ್ಲಿ ಮುರಿದುಕೊಳ್ಳುತ್ತಿದ್ದು, ಅದನ್ನು ಜೆಸ್ಕಾಂ ಇಲಾಖೆಗೆ ಪಾವತಿ ಮಾಡದೇ ಬಾಕಿ ಉಳಿಸಿಕೊಂಡಿದ್ದಾರೆ. ಆದ್ದರಿಂದ ನಮ್ಮ ಮನೆಗಳಿಗೆ 7 ದಿನಗಳಿಂದ ವಿದ್ಯುತ್ ಇಲ್ಲದಂತಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಈ  ಕೂಡಲೇ ಕಾಲೋನಿಯ ಎಲ್ಲಾ ನಿವಾಸಿಗಳ ಸಭೆಯನ್ನು ಕರೆಯಲಾಗಿದ್ದು, ಸಭೆಯ ಬಳಿಕ ಮುಂದಿನ ನಡೆ ಕುರಿತು ತೀರ್ಮಾನಿಸಲಾಗುವುದು ಎಂದು ತಿಳಿಸಿದರು.

LEAVE A REPLY

Please enter your comment!
Please enter your name here