ಐಟಿಐ ಕೈಗಾರಿಕಾ ತರಬೇತಿ ಕಾಲೇಜು ಆರಂಭ

1
197

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದಲ್ಲಿ ಪ್ರಸ್ತುತ 2017-18 ನೇ ಸಾಲಿನ ಶೈಷಣಿಕ ವರ್ಷದಿಂದಲೇ ಶಾಸಕ ಜೆ.ಕೆ ಕೃಷ್ಣಾರೆಡ್ಡಿ ರವರ ಹೆಚ್ಚಿನ ಆಸಕ್ತಿ ಯಿಂದಾಗಿ ನೂತನ ಐಟಿಐ ಕೈಗಾರಿಕಾ ತರಬೇತಿ ಕಾಲೇಜು ಆರಂಭವಾಗಲಿದ್ದು,ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ನೂತನ ಐಟಿಐ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಲಕ್ಷ್ಮೀನಾರಾಯಣ ರಾಜುರವರು ಮನವಿ ಮಾಡಿದ್ದಾರೆ.

ಚಿಂತಾಮಣಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿನಿಲಯದಲ್ಲಿ ಚಿಂತಾಮಣಿಯ ಶಾಸಕ ಜೆ.ಕೆ ಕೃಷ್ಣಾರೆಡ್ಡಿ ರವರ ಹೆಚ್ಚಿನ ಆಸಕ್ತಿ ಯಿಂದಾಗಿ 2017-18 ನೇ ಸಾಲಿಗೆ ತಾಲ್ಲೂಕಿನಲ್ಲಿ ಹೊಸದಾಗಿ ಐ.ಟಿ.ಐ ಕೈಗಾರಿಕಾ ತರಬೇತಿ ಕಾಲೇಜು ಮಂಜೂರಾಗಿ ಸ್ಥಾಪನೆ ಮಾಡಲು ಸರ್ಕಾರ ಆದೇಶ ಮಾಡಿದ್ದು, ಜಾಗದ ಕೊರತೆ ಯಿಂದಾಗಿ ಸ್ಥಳೀಯ ಶಾಸಕರು ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿ ನಿಲಯದಲ್ಲಿ ತಾತ್ಕಾಲಿಕವಾಗಿ ಕಾಲೇಜು ಆರಂಭ ಮಾಡಲು ಮನವಿ ನೀಡಿದ್ದು ,ಈ ಪ್ರಸ್ತುತ ವರ್ಷ ದಿಂದಲ್ಲೇ “ಪಿಟ್ಟರ್” ಹಾಗೂ “ಎಲೆಕ್ಟ್ರಿಷಿಯನ್” ತರಗತಿಗಳು ಆರಂಭವಾಗಲಿದ್ದು,ಆಸಕ್ತ ವಿದ್ಯಾರ್ಥಿಗಳು ತರಗತಿಗಳಿಗೆ ಸೇರಲು ಒಂದು ವಾರದ ನಂತರ ಉದ್ಯೋಗ ಮತ್ತು ಕೈಗಾರಿಕಾ ತರಬೇತಿ ಸಂಸ್ಥೆಯ ವೆಬ್ ಸೈಟ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು ಆಥವಾ ಖುದ್ದಾಗಿ ಐಟಿಐ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸುವಂತೆ ಹಾಗೂ ಈ 9916852249 ಮೊಬೈಲ್ ಕರಗೆ ಸಂಪರ್ಕಿಸುವಂತೆ ನೂತನ ಐಟಿಐ ತರಬೇತಿ ಕೇಂದ್ರದ ಪ್ರಭಾರ ಪ್ರಾಂಶುಪಾಲ ಲಕ್ಷ್ಮೀ ನಾರಾಯಣರಾಜುರವರು ಮನವಿ ಮಾಡಿದ್ದಾರೆ.

ಇನ್ನೂ ನೂತನವಾಗಿ ಆರಂಭವಾಗಲ್ಲಿರುವ ಐಟಿಐ ಕೈಗಾರಿಕಾ ತರಬೇತಿ ಕಾಲೇಜು ನಡೆಯುವ ಸರ್ಕಾರಿ ಪಾಲಿಟೆಕ್ನಿಕ್ ನ ವಿದ್ಯಾರ್ಥಿನಿಲಯಕ್ಕೆ ನಗರಸಭಾ ಸದಸ್ಯ ಅಬ್ಬುಗುಂಡು ಶ್ರೀ ನಿವಾಸ ರೆಡ್ಡಿ, ಸರ್ಕಾರಿ ಮಹಿಳಾ ಕಾಲೇಜಿನ ಉಪನ್ಯಾಸಕ ಡಾ.ಎಂ.ಎನ್ ರಘು ರವರೊಂದಿಗೆ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀ ನಾರಾಯಣ ರಾಜು ರವರು ಬೇಟಿ ನೀಡಿ ಪರಿಶೀಲನೆ ಮಾಡಿದರು.

1 COMMENT

LEAVE A REPLY

Please enter your comment!
Please enter your name here