ಐಟಿ ದಾಳಿ ಖಂಡಿಸಿ ಪ್ರತಿಭಟನೆ..

0
298

ಬಾಗಲಕೋಟೆ: ಡಿ.ಕೆ.ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆಸಲು ಕೇಂದ್ರ ಸಕಾ೯ರವೇ ಕಾರಣವೆಂದು ಆರೋಪಿಸಿ ಬ್ಲಾಕ್ ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ ನಡೆಸಿರೋ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ನಡೆದಿದೆ. ನಗರದ ದೇಸಾಯಿ ವೃತ್ತದ ಬಳಿ ಜಮಾಯಿಸಿದ ನೂರಾರು ಕಾಂಗ್ರೆಸ್ ಕಾಯ೯ಕತ೯ರು ಮಾನವ ಸರಪಳಿ ನಿಮಿ೯ಸಿ ರಸ್ತೆ ತಡೆ ನಡೆಸಿದ್ರು. ಕೇಂದ್ರ ಸಕಾ೯ರದ ವಿರುದ್ದ ಘೋಷಣೆಗಳನ್ನ ಕೂಗುತ್ತಾ ನಗರದ ವಿವಿದೆಡೆ ಪ್ರತಿಭಟನಾ ಮೆರವಣಿಗೆ ನಡೆಸಿದ್ರು. ಅಂತಿಮವಾಗಿ ಜಮಖಂಡಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here