ಐಟಿ ದಾಳಿ ಹಿನ್ನೆಲೆ,ಲಾಡ್ ಬ್ರದರ್ಸ್ ಜಂಟಿ ಪ್ರತಿಕ್ರಿಯೆ.. ‌

0
375

ಬಳ್ಳಾರಿ:ಇಂಧನ ಸಚಿವ ಡಿಕೆಶಿ ಮನೆ ಮೇಲೆ ಐಟಿ ದಾಳಿ ಹಿನ್ನೆಲೆ ಬಳ್ಳಾರಿಯಲ್ಲಿ ಲಾಡ್ ಬ್ರದರ್ಸ್ ಜಂಟಿ ಪ್ರತಿಕ್ರಿಯೆ ನೀಡಿದ್ದಾರೆ.

ಮೊದಲು ಮಾತನಾಡಿದ ಸಚಿವ ಸಂತೋಷ್ ಲಾಡ್ ಕಾಂಗ್ರೆಸ್ ಸರಕಾರ ಇರುವ ಕಡೆಯಷ್ಟೆ ಬಿಜೆಪಿ ಐಟಿ ದಾಳಿ ನಡೆಸುತ್ತಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ. ಐಟಿ ದಾಳಿ ಮಾಡುವುದಾದರೆ ಮೊದಲು ಮೋದಿ ಅವರ ಮನೆಯ ಮೇಲೆ ಆಗಲಿ, ಅವರ ಮೇಲೆ ಕೂಡ ಸಾಕಷ್ಟು ಆರೋಪಗಳಿವೆ. ಕಾಂಗ್ರೆಸ್ ಸರಕಾರ ಇರುವ ಜಡೆ ದಾಳಿ ಮಾಡಿಸುತ್ತಿರುವ ಮೋದಿಯವರು ಪ್ರಜಾಪ್ರಭುತ್ವ ವನ್ನು ಎಷ್ಟರಮಟ್ಟಿಗೆ ಪಾಲನೆ ಮಾಡುತ್ತಿದೆ ಎಂದು ತಿಳಿಯುತ್ತದೆ ಎಂದು ಹೇಳಿದರು. ಎಂಎಲ್ಸಿ ಗೋವಿಂದರಾಜು ಅವರ ಮನೆಯಲ್ಲಿ ಸಿಕ್ಕ ಡೈರಿ ವಿಚಾರಚಾಗಿ ಹೇಳೋದಾದರೆ, ಡೈರಿಯಲ್ಲಿ ಉಲ್ಲೇಖ ಮಾಡಿದ್ದು ಅವರೇ, ಇಟ್ಟು ರೈಡ್ ಮಾಡಿಸಿದ್ದಾರೆ. ಈ ದಾಳಿ ಎಷ್ಟರ ಮಟ್ಟಿಗೆ ಸರಿ ಎಂದು ಹೇಳಿದರು. ಇದಲ್ಲದೇ ನಮ್ಮ ಪಕ್ಷದ ವತಿಯಿಂದ ವಿರೋಧ ಮಾಡ್ತೆವೆ. ನಮ್ಮ ಪಕ್ಷ ಇದೆ ಹೋರಾಟ ಮಾಡ್ತೆವೆ ಎಂದು ಹೇಳಿದರು.
ನಗರ ಶಾಸಕ ಅನಿಲ್ ಲಾಡ್ ಕೂಡ ಪ್ರತಿಕ್ರಿಯೆ ನೀಡಿ, ಈ ದಾಳಿ ಗುಜರಾತ್ ಶಾಸಕರು ಬಂದ ಕಾರಣಕ್ಕೆ ಆಗಿದ್ದು, ಇಂದು ಡಿಕೆಶಿ ಮೇಲೆ ಆಗಿದೆ. ನಾಳೆ ನಮ್ಮ ಮೇಲೂ ಸಹ ಆಗಬಹುದು. ನಾವು ಎದುರಿಸಲು ಸಿದ್ದ. ಉತ್ತರ ಪ್ರದೇಶ ಸಿಎಂ ಮೇಲೆ ಸಾಕಷ್ಟು ಆರೋಪಗಳಿವೆ ಅವರ ಮೇಲೆ ಯಾಕೆ ಆಗಿಲ್ಲ. ಕಾಂಗ್ರೆಸ್ ಪ್ರಭಾವಿ ನಾಯಕರನ್ನು ಟಾರ್ಗೇಟ್ ಮಾಡಲಾಗಿದೆ. ಅರುಣ್ ಜೇಟ್ಲಿಯವರು ಹೇಳುವ ಪ್ರಕಾರ ಇದು ಮೊದಲೇ ನಿಗದಿಯಾಗಿತ್ತು ಅಂತಾರೆ. ಆದರೆ ಇದು ಪಕ್ಕಾ ಗುಜರಾತ್ ಶಾಸಕರು ಬಂದ ಕಾರಣಕ್ಕೆ ಆಗಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here