ಐತಿಹಾಸಿಕ ತುಂಗಭದ್ರೆ ಹೂಳೆತ್ತುವ ಕಾರ್ಯಕ್ಕೆ ರೈತರಿಂದ ಚಾಲನೆ

0
910

ಬಳ್ಳಾರಿ /ಹೊಸಪೇಟೆ:ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ಹೂಳೆತ್ತುವ ಕಾರ್ಯಕ್ಕೆ ನೂರಾರು ರೈತರು, ನಗರದ ವ್ಯಾಸನಕೇರಿ ಬಳಿಯ ಹಿನ್ನೀರಿನ ಪ್ರದೇಶದಲ್ಲಿ ಗುರುವಾರ ಪ್ರಾಯೋಗಿಕವಾಗಿ ಚಾಲನೆ ನೀಡಿದರು.133 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 37 ಟಿಎಂಸಿಯಷ್ಟು ತುಂಬಿರುವ ಹೂಳು ತೆಗೆಯಲು ಸರ್ಕಾರ ಮುಂದಾಗದ ಹಿನ್ನೆಲೆ ರೈತರಿಂದಲೇ ಹೂಳು ತೆಗೆಯುವ ಕಾರ್ಯವನ್ನು ಆರಂಭಿಸಲಾಯಿತು.ಜಿಲ್ಲೆಯ ವಿವಿಧ ಮಠಾಧೀಶರ ಸಹಯೋಗದಲ್ಲಿ ತುಂಗಭದ್ರೆಗೆ ಪೂಜೆ ಸಲ್ಲಿಸುವ ಮೂಲಕ ರೈತರು, 50ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಲ್ಲಿ ಹೂಳನ್ನು ರೈತರ ಹೊಲ-ಗದ್ಧೆಗಳಿಗೆ ಸಾಗಿಸಲು ಕ್ರಮ ಕೈಗೊಳ್ಳಲಾಯಿತು.ಈ ಭಾಗದ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ಹೂಳೆತ್ತುವುದು ರೈತರಿಗೆ ಅಸಾಧ್ಯವೇನು ಅಲ್ಲ ಎಂಬ ಸಂದೇಶವನ್ನು ಸರ್ಕಾರಕ್ಕೆ ರವಾನೆ ಮಡಲಾಯಿತು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಹಾಗೂ ಮಠಾಧೀಶರ ಧರ್ಮ ಪರಿಷತ್ ನೇತೃತ್ವದಲ್ಲಿ ಹೂಳೆತ್ತುವ ಕಾರ್ಯ ಆರಂಭವಾಗಿದ್ದು, ಜಲಾಶಯದ ಸುತ್ತುಮುತ್ತಲಿನ ಗ್ರಾಮದ ಹೊಲ-ಗದ್ದೆಗಳಿಗೆ ಹೂಳನ್ನು ಸಾಗಿಸಲಾಗುತ್ತಿದೆ. ಮುಂದಿನ ಬೇಸಿಗೆ ಹಂಗಾಮಿನಲ್ಲಿ ಬಳ್ಳಾರಿ ಸೇರಿದಂತೆ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ರೈತರನ್ನು ಒಗ್ಗೂಡಿಸಿಕೊಂಡು, ಪ್ರತಿವರ್ಷವೂ ಹೂಳೆತ್ತಲು ತೀರ್ಮಾನಿಸಲಾಗಿದೆ.

ಗದಗಿನ ವೀರೇಶ್ವರ ಆಶ್ರಮದ ಕಲ್ಲಯ್ಯಜ್ಜ, ಕೊಟ್ಟೂರಿನ ಶಂಕರ ಸ್ವಾಮೀಜಿ, ಮರಿಯಮ್ಮನಹಳ್ಳಿ ಗುರುಪಾದ ಮಠದ ಮಲ್ಲಿಕಾರ್ಜುನ ಮಹಾ ಸ್ವಾಮಿಜಿ, ಬಳ್ಳಾರಿ ಕಲ್ಯಾಣ ಸ್ವಾಮಿಜಿ, ಬೆಣ್ಣಿಹಳ್ಳಿ ಹೀರೆಮಠದ ಪಂಚಾಕ್ಷರಿ ಸ್ವಾಮಿಜಿ, ನಂದಿಪುರ ಮಹೇಶ್ವರ ಸ್ವಾಮಿಜಿ, ಬಳ್ಳಾರಿಯ ಕಲ್ಯಾಣ ಸ್ವಾಮೀಜಿ, ಕೊಟ್ಟೂರಿನ ಚಾನುಕೋಟಿ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಜಿ, ರೈತ ಮುಖಂಡ ಚಾಮರಸ ಪಾಟೀಲ್, ದರೂರು ಪುರುಷೋತ್ತಮ ಗೌಡ, ಗೋಣಿ ಬಸಪ್ಪ, ಎಮ್.ಎಲ್.ಕೆ.ನಾಯ್ಡು, ಕುಮಾರ ಸ್ವಾಮಿ ಹಾಗೂ ಹಲವು ರೈತ ಮುಖಂಡರು ಭಾಗಿದ್ದರು.

LEAVE A REPLY

Please enter your comment!
Please enter your name here