ಒಂದೇ ದಿನದಲ್ಲಿ 2 ಟಿ.ಎಂ.ಸಿ.ನೀರು ಸಂಗ್ರಹ..!

0
272

ಮುಂಗಾರು ಹಂಗಾಮಿಗೆ ನೀರಿನ ಆಭಾವ ತಲೆದೋರುವುದಿಲ್ಲ:ತಜ್ಞರ ಅಭಿಪ್ರಾಯ

ಬಳ್ಳಾರಿ /ಹೊಸಪೇಟೆ:ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ಸೇರಿ ತ್ರಿವಳಿ ರಾಜ್ಯಗಳ ಲಕ್ಷಾಂತರ ಕೃಷಿ ಭೂಮಿಗಳ ರೈತರ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ ಒಳ ಹರಿವಿನ ಪ್ರಮಾಣ ಭಾನುವಾರ ಏರಿಕೆ ಕಂಡಿದ್ದು, 26 ಸಾವಿರಕ್ಕೂ ಆಧಿಕ ಕ್ಯೂಸೆಕ್ಸ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ.

ಕಳೆದ ನಾಲ್ಕಾರು ದಿನಗಳಿಂದ ತುಂಗಭದ್ರಾ ಜಲಾನಯದ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯಕ್ಕೆ ಹರಿದು ಬರುತ್ತಿರುವ ಒಳ ಹರಿವಿನ ಪ್ರಮಾಣದಲ್ಲಿ ದ್ವಿಗುಣಗೊಂಡಿದ್ದು, ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಜಲಾಶಯದಲ್ಲಿ ಒಂದೇ ದಿನದಲ್ಲಿ 2 ಟಿ.ಎಂ.ಸಿ ನೀರು ಸಂಗ್ರಹವಾಗಿದ್ದು, ಕಳೆದ ವರ್ಷಗಿಂತಲೂ ಈ ವರ್ಷ ಜಲಾಶಯದಲ್ಲಿ 11 ಟಿ.ಎಂ.ಸಿ.ಯಷ್ಟು ನೀರು ಆಧಿಕ ಸಂಗ್ರಹವಿದೆ. ಪ್ರಸ್ತುತ ಮುಂಗಾರು ಹಂಗಾಮಿಗೆ ನಿರಿನ ಕೊರತೆ ಉಂಟಾಗುವುದಿಲ್ಲ, ಆದರೆ, ಬೇಸಿಗೆ ಹಂಗಾಮಿಗೆ ರೈತರು ಭತ್ತ ಹಾಗೂ ಕಬ್ಬು ಬಳೆ ಬೆಳೆಯಲು ಕೈ ಹಾಕುವಂತ್ತಿಲ್ಲ ಎಂದು ಕೃಷಿ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಜಿಲ್ಲೆ ಸೇರಿದಂತೆ ಇತರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸುರಿಯುತ್ತಿರುವ ಬಾರಿ ಮಳೆಗೆ ಕಳೆದ ಎರಡು ಮೂರು ದಿನಗಳಿಂದ ಒಳ ಹರಿವಿನ ಪ್ರಮಾಣ ದ್ವಿಗುಣಗೊಂಡಿದ್ದು, ಒಂದೇ ದಿನಕ್ಕೆ ಎರಡು ಟಿ.ಎಂ.ಸಿ. ನೀರು ಜಲಾಶಯದಲ್ಲಿ ಸಂಗ್ರಹ ವಾಗಿದೆ. ಜಲಾಶಯದ ಸುತ್ತಮುತ್ತಲಿನ ಸ್ಥಳೀಯ ಪ್ರದೇಶದಲ್ಲಿ ಮಳೆ ಬೀಳುವುದರಿಂದ ಜಲಾಶಯದಲ್ಲಿ ನೀರು ಹರಿದು ಬರುತ್ತಿದೆ. ತುಂಗ ಜಲಾಶಯದಿಂದ ಕೇವಲ 2000 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಕ್ರಮೇಣ ನೀರಿನ ಒಳ ಹರಿವು ಕ್ಷೀಣಸಲಿದೆ  ಎಂದು ತುಂಗಭದ್ರಾ ಮಂಡಳಿ ಅಧಕಾರಿಗಳು ತಿಳಿಸಿದ್ದಾರೆ.

ಭಾನುವಾರ ಜಲಾಶಯದ ನೀರಿನ ಮಟ್ಟ ಹೀಗಿದೆ. ಗರಿಷ್ಟ ಮಟ್ಟ 1633 ಅಡಿಯಿದ್ದರೆ, ಇಂದಿನ ಮಟ್ಟ 1625.28 ಅಡಿಯಿದೆ. ಒಳ ಹರಿವು 26150 ಕ್ಯೂಸೆಕ್ಸ್ ಇದ್ದು, 3636 ಕ್ಯೂಸೆಕ್ಸ್ ನೀರನ್ನು ಹೊರ ಹರಿ ಬಿಡಲಾಗುತ್ತಿದೆ. ಸಂಗ್ರಹ. 73.81 ಟಿ.ಎಂ.ಸಿ ಇದೆ. ಕಳೆದ ವರ್ಷ ಈ ದಿನದಲ್ಲಿ 1614.81 ಅಡಿಗಳು, ಒಳ ಹರಿವು 9354 ಕ್ಯೂಸೆಕ್ಸ್, ಹೊರ ಹರಿವು 882 ಕ್ಯೂಸೆಕ್ಸ್ ಇತ್ತು. ನೀರಿನ ಸಂಗ್ರಹ 45.31 ಟಿ.ಎಂ.ಸಿ. ದಾಖಲಾಗಿತ್ತು.

LEAVE A REPLY

Please enter your comment!
Please enter your name here