ಒಲಿಗೆ ಯಂತ್ರಗಳ ವಿತರಣಾ ಕಾರ್ಯಕ್ರಮ.

0
115

ಚಿಕ್ಕಬಳ್ಳಾಪುರ/ಚಿಂತಾಮಣಿ:- ನಗರದ 31 ನೇ ವಾರ್ಡ್ ತಿಮ್ಮಸಂದ್ರದಲ್ಲಿ ಏರ್ಪಡಿಸಲಾಗಿದ್ದ ಸಮಾಜ ಕಲ್ಯಾಣ ಇಲಾಖೆಯ ಡಾ.ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ವತಿಯಿಂದ ಕೌಶಲ್ಯ ಅಭಿವೃದ್ಧಿ ನಿಗಮ ಮತ್ತು ಆದಾಯಗಳಿಕೆಗಾಗಿ ಚರ್ಮ ಉತ್ಪನ್ನಗಳ ತರಬೇತಿ ಪಡೆದ 30 ಫಲಾನುಭವಿಗಳಿಗೆ ಒಲಿಗೆ ಯಂತ್ರಗಳನ್ನು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಡಜನತೆಯನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದ್ದು ಈ ಯೋಜನೆಗಳು ಪ್ರಚಾರಕ್ಕೆ ಮಾತ್ರ ಸೀಮಿತವಾಗದೆ ಅರ್ಹಫಲಾನುಭವಿಗಳಿಗೆ ತಲುಪುವಂತಾಗಲ್ಲಿ ಎಂದು ಶಾಸಕ ಜೆ.ಕೆ ಕೃಷ್ಣಾ ರೆಡ್ಡಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ನಗರಸಭೆ ಅಧ್ಯಕ್ಷ ಜಿಯಾ ಉಲ್ಲಾ ರೆಹಮಾನ್ , ಸದಸ್ಯರಾದ ರಾಮಮೂರ್ತಿ ,ವೆಂಕಟರಮಣಪ್ಪ ,ಸಾದಪ್ಪ ,ಮಾಜಿ ಸದಸ್ಯ ರೆಡ್ಡಪ್ಪ , ಜೆ.ಡಿ.ಎಸ್ ಮುಖಂಡರಾದ ನಗರ ಘಟಕ ಅಧ್ಯಕ್ಷ ಬಿ.ವಿ ಮಂಜುನಾಥ್ ಚಾರಿ ,ಅನಂದ ರೆಡ್ಡಿ ,ಬಾಬು ರೆಡ್ಡಿ ,ಪೆದ್ದೂರು ನಾಗರಾಜ್ ರೆಡ್ಡಿ ,ಅಮರ್ ,ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here