ಓವೈಸಿ ರಾಷ್ಟ್ರೀಯ ಅಧ್ಯಕ್ಷ ಆಗಮನ…

0
123

ರಾಯಚೂರು-ದಿ.19 ರಂದು ನಗರಕ್ಕೆ ಸಂಸದ ಹಾಗೂ ಓವೈಸಿ ರಾಷ್ಟ್ರೀಯ ಅಧ್ಯಕ್ಷ ಬೇರೀಷ್ಟರ್ ಅಸಾದುದ್ದೀನ್ ಆಗಮಿಸಲಿದ್ದಾರೆಂದು ಆಲ್ ಇಂಡಿಯಾ ಮಜೀದ್ ಎ ಇತೆಹಾದ್ ಉಲ್ ಮಸಲಿಮೀನ್ ಜಿಲ್ಲಾಧ್ಯಕ್ಷ ಹಾಗೂ ಜಂಟಿ ಕಾರ್ಯದರ್ಶಿ ನೂರ್ ಮಹ್ಮದ್ ಹೇಳಿದರು. ಅವರಿಂದು ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿ ಹೈದರಾಬಾದ್ ಸಂಸದ ಬೇರಿಷ್ಟರ್ ಅಸಾದುದ್ದೀನ ಓವೈಸಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದು ಚುನಾವಣೆಯ ನಿಮಿತ್ತವಾಗಿ ದಿನಾಂಕ 19 ರಂದು ಮಹಾತ್ಮಾ ಗಾಂಧೀಜಿ ಕ್ರಿಡಾಂಗಣದಲ್ಲಿ ಬಹಿರಂಗ ಸಮಾವೇಶವನ್ನು ಹಮ್ಮಿಕೊಂಡಿದೆ ಎಂದರು.

ಸಮಾವೇಶದ ಹಿನ್ನೆಲೆಯಲ್ಲಿ ಮಹಾತ್ಮಾ ಗಾಂಧೀಜಿ ಕ್ರಿಡಾಂಗಣದಲ್ಲಿ ಕಾರ್ಯಕ್ರಮ ಜರುಗಿಸಲು ಕಳೆದ ತಿಂಗಳು ಜಿಲ್ಲಾಧಿಕಾರಿಗಳಿಗೆ ಒಂದು ದಿನದ ಮಟ್ಟಿಗೆ ಸಮಾವೇಶಕ್ಕಾಗಿ ಕ್ರಿಡಾಂಗಣ ನೀಡಲು ಮನವಿ ಸಲ್ಲಿಸಲಾಗಿತ್ತು. ಜುಲೈ.25ರಂದು ಜಿಲ್ಲಾಧಿಕಾರಿಗಳು ಒಪ್ಪಿಗೆ ಪತ್ರ ನೀಡಿದ್ದಾರೆ. ಸಮಾವೇಶದ ಭಾಗವಾಗಿ ಒಪ್ಪಿಗೆ ನೀಡಬಾರದೆಂದು ಸರಕಾರದಿಂದ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದೆ. ಓವೈಸಿ ಅಸಾದುದ್ದೀನ ಅವರು ಪ್ರಚೋಧನಾತ್ಮಕ ಭಾಷಣ ಹಿನ್ನೆಲೆ ನಿಷೇಧಿಸಬೇಕೆಂದು ಮಾಹಿತಿ ನೀಡಿದ್ದು ಒಬ್ಬ ಸಂಸದರಾಗಿ ಯಾವ ಕಾರ್ಯಕ್ರಮದಲ್ಲಿಯೂ ಪ್ರಚೋಧನಾತ್ಮಕವಾಗಿ ಭಾಷಣ ಮಾಡಿಲ್ಲ ಎಂದರು.
ರಾಜ್ಯ ಸರಕಾರ ಮತ್ತು ಬಿಜೆಪಿ ನಾಯಕರು ಕೆಲ ಸಮಾವೇಶಗಳಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ಮಾತನಾಡಿದ ಕುರಿತು ಪ್ರಕರಣ ದೂರು ದಾಖಲಾಗಿವೆ. ಆದರೆ ಅಸಾದುದ್ದೀನ ಅವರು ಇಂತಹ ಭಾಷಣವನ್ನು ಮಾಡಿಲ್ಲ ಆದರೆ ಸಮಾವೇಶಕ್ಕೆ ಸರಕಾರ ಅನುಮತಿ ನೀಡಲು ನಿರಾಕರಿಸುವುದು ಸರಿಯಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹ್ಮದ್ ಶಾಹಿ ರಜಾ, ಶಬ್ಬೀರ್ ಅಹ್ಮದ್, ಖಾಜಾ ಮೈನುದ್ದೀನ, ಫರಾಹತ್, ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here