ಕಟ್ಟಡ ಕಾರ್ಮಿಕನ ಕೊಲೆ

0
250

ಬೀದರ್/ಬಸವಕಲ್ಯಾಣ:ಕಟ್ಟಡ ಕಾರ್ಮಿಕ ನೊಬ್ಬನನ್ನು ಕೊಲೆ ಮಾಡಿ ಎಸೆದಿರುವ ಘಟನೆ ತಾಲೂಕಿನ ಮಂಗಳೂರ ಗ್ರಾಮದ ಬಳಿ ನಡೆದಿದ್ದು, ಗ್ರಾಮದ ಸಮಿಪದ ಕೆರೆಯಲ್ಲಿ ಶವ ಪತ್ತೆಯಾಗಿದೆ. ಜೈಭೀಮ್(ಜಯಕುಮಾರ) ಮಸ್ತಾನ ಖೆಂಡೆನೊರ (30) ಕೊಲೆಯಾದ ವ್ಯಕ್ತಿ.

ಮೂಲತಃ ಕಲಬುರಗಿ ಜಿಲ್ಲೆಯ ಡೊಂಗರಗಾವ ಗ್ರಾಮದವನಾಗಿದ್ದ ಈತ ತನ್ನ ಪತ್ನಿ ತವರುರಾಗಿರುವ ಹುಮನಾಬಾದ ತಾಲೂಕಿನ ಮೋಳಕೇರಾ ಗ್ರಾಮದಲ್ಲಿ ವಾಸಿಸುತಿದ್ದ. ಕಟ್ಟಡ ಕಾರ್ಮಿಕವಾಗಿ ಕೆಲಸ ಮಾಡುತಿದ್ದ ಈತ ಜ. 2ರಂದು ಕಾಣಿಯಾಗಿದ್ದ. ಇಂದು ಬೆಳಗಿನ ಜಾವ ಮಂಗಳೂರ ಸಮಿಪದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಡಿವೈಎಸ್ಪಿ ಚಂದ್ರಕಾಂತ ಪೂಜಾರಿ, ಸಿಪಿಐ ಮಲ್ಲಿಕಾರ್ಜುನ ಡಪ್ಪಿನ್, ಪಿಎಸ್‍ಐ ಶಿರೋಮಣಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here