ಕಟ್ಟಡ ಕಾರ್ಮಿಕರ ಸಮಾವೇಶ…

0
132

ಮಂಡ್ಯ/ಮಳವಳ್ಳಿ : ತಾಲ್ಲೂಕು ಕಟ್ಟಡ ಕಾರ್ಮಿಕರ ಸಮಾವೇಶ ಮಳವಳ್ಳಿ ಪಟ್ಟಣದ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ನಡೆಯಿತು . ಸಮಾವೇಶವನ್ನು ಸಿಐಟಿಯು ಜಿಲ್ಲಾ ಮುಖಂಡ ಜಿ.ರಾಮಕೃಷ್ಣ ಉದ್ಘಾಟಿಸಿ ಮಾತನಾಡಿ, ಕೂಲಿಕಾರರಿಗೆ ಸಾಲ ನೀಡಲು ಸರ್ಕಾರ ಮೀನಾ ವೇಷ ನಡೆಸುತ್ತಿರುವುದು ವಿಷಾದನೀಯ ಸಂಗತಿ ಎಂದ ಅವರು ದೊಡ್ಡ ಬಂಡವಾಳಶಾಹಿಗಳಿಗೆ ಕೋಟಿಗಟ್ಟಲೆ ಹಣವನ್ನು ಅರ್ಜಿಯನ್ನು ಸಲ್ಲಿಸಿದ ಒಂದು ಗಂಟೆಗೆ ಮಂಜೂರು ಮಾಡುತ್ತದೆ ಆದರೆ ಕಟ್ಟಡ ಕಾರ್ಮಿಕರು ಸಾಲವನ್ನು ವರ್ಷಗಟ್ಟಲೆ ಯಾದರೂ ಇನ್ನೂ ವಿತರಿಸಿಲ್ಲ . ಇದಕ್ಕಾಗಿ ನಾವೆಲ್ಲರೂ ಸಂಘಟಿತರಾಗಿ ಹೋರಾಟ ಮಾಡಿದರೆ ಕಾರ್ಮಿಕರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ವನ್ನು ತಡೆಗಟ್ಟಬಹುದು ಎಂದರು. ಇದಲ್ಲದೆ ಕಾರ್ಮಿಕರಿಗೂ ಸಹ ಪಿಂಚಣಿಯನ್ನು ತಲಾ 3ಸಾವಿರ ರೂ ನೀಡಬೇಕು, ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಮೋಧಿರವರು ಉಳ್ಳವರಿಗೆ ಮಾತ್ರ ಮಣೆಹಾಕುತ್ತಿದ್ದಾರೆ . ಕಡುಬಡವರ ಸ್ಥಿತಿ ಏನಾಗುಬೇಕು ಎಂದು ಪ್ರಶ್ನಿಸಿದರು. ಕಾರ್ಯಕ್ರಮ ದಲ್ಲಿ ಎಸ್ಎಫ್ ಐ ನ ತಿಮ್ಮೇಗೌಡ, ತಾಲ್ಲೂಕು ಕಟ್ಟಡ ಕಾರ್ಮಿಕ ಅಧ್ಯಹ್ಷ ಕುಮಾರ್, ಗುರುಸ್ವಾಮಿ. ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here