ಕಟ್ಟಡ ಕೆಡವಲು ಮುಂದಾದ್ರೆ?

0
231

ಚಿಕ್ಕಬಳ್ಳಾಪುರ/ ಶಿಡ್ಲಘಟ್ಟ :- ನಗರದ ಟಿ.ಬಿ ಮುಖ್ಯ ರಸ್ತೆಯಲ್ಲಿರುವ ನಗರಸಭೆಯ ಮಳಿಗೆಗಳನ್ನು ಬೆಳಗಿನ ಜಾವ ಸುಮಾರು ೬ ಗಂಟೆ ಸಮಯದಲ್ಲಿ ಏಕಾಏಕಿ ಬಂದು ನಗರಸಭೆ ಅಧಿಕಾರಿಗಳು ಅಂಗಡಿ ಮಳಿಗೆಗಳನ್ನು ಜೇಸಿಬಿ ಮೂಲಕ ಕೆಡವಿ ನೆಲಸಮ ಮಾಡಲು ಮುಂದಾಗಿ ಮಟ್ಟಲುಗಳನ್ನು ಕೆಡವಿದ ವೇಳೆ ಮಳಿಗೆಯಲ್ಲಿ ಬಾಡಿಗೆಗಿದ್ದ ಅಂಗಡಿ ಮತ್ತು ಇತರೆ ಕಛೇರಿಗಳ ಮಾಲಿಕರು ಹಾಗೂ ವ್ಯಾಪಾರಸ್ಥರು ಸೇರಿ ಯಾವುದೇ ರೀತಿಯ ನೋಟಿಸ್ ನೀಡದೆ ಮಳಿಗೆಯನ್ನು ಕೆಡವುತ್ತಿರುವುದನ್ನು ತಡೆದು ಆಕ್ರೋಶ ವ್ಯಕ್ತ ಪಡಿಸಿದರು.

ಇದೇ ವೇಳೆ ನಗರಸಭೆಯ ಆಯುಕ್ತ ಹರೀಶ್ ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮುಖಿ ನಡೆಯಿತು.

ಅಧಿಕಾರಿಗಳ ಉದ್ಗಟತನವನ್ನು ಪ್ರಶ್ನಿಸಿ ಆರ್. ಶ್ರೀರಾಮಣ್ಣ ಮಾತನಾಡಿ ಬಾಡಿಗೆದಾರರನ್ನು ಬೀದಿಗೆ ತಳ್ಳಿ ಮಳಿಗೆಗಳಲ್ಲಿದ್ದ ಲಕ್ಷಾಂತರ ರೂಪಾಯಿಗಳಷ್ಟು ಬೆಲೆ ಬಾಳುವ ವಸ್ತುಗಳಿದ್ದು ಅವುಗಳನ್ನು ಸಹ ನಾಶ ಮಾಡಲು ಮುಂದಾದ ಅಧಿಕಾರಿಗಳ ವಿರುದ್ದ ತಿರುಗಿ ಬಿದ್ದರು. ರಾಜಕಾರಿಣಿಗಳು ತಮ್ಮ ಅಧಿಕಾರದ ಅವಧಿಯಲ್ಲೆ ಹೆಸರುಗಳನ್ನು ನಾಮ ಫಲಕದಲ್ಲಿ ಹಾಕಿಸಿಕೊಳ್ಳವಂತ ವ್ಯವಸ್ಥಿತವಾದ ಕೆಲಸ ಮಾಡಿದ್ದಾರೆಂದು ಆರೋಪಿಸಿದರು.

ಮಳಿಗೆಯಲ್ಲಿ ಬಾಡಿಗೆಗೆ ಇದ್ದ ದೇವರಾಜು, ಬಿ.ಸತ್ಯೆನಾರಾಯಣ್, ನೌಷದ್ ಅಲಿ,ಚಾನ್ ಪಾಷಾ, ರಾಮ್ ಮೋಹನ್, ರಾಜಣ್ಣ, ವಕೀರಾದ ವೇಣುಗೋಪಾಲ್, ಮುನಿಸ್ವಾಮಿಗೌಡ, ನಾರಾಯಣಸ್ವಾಮಿ ಮತ್ತು ನರಸಿಂಹಮೂರ್ತಿ ಹಾಗೂ ಇತರರು ಸೇರಿದಂತೆ ಸುಮಾರು ವರ್ಷಗಳಿಂದ ಬಾಡಿಗೆಗೆ ಇದ್ದ ಮಳಿಗೆಯನ್ನು ನೆಲಸಮ ಮಾಡುತ್ತಿದ್ದ ಘಟನೆಯನ್ನು ಕಂಡು ಕಂಗಾಲಾದರು.

ನಗರಸಭೆಯ ಅಧಿಕಾರಿಗಳು ಮಳಿಗೆಗಳನ್ನು ಕಣ್ಣ ಮುಂದೆಯೇ ನೆಲಸಮ ಮಾಡುತ್ತಿರುವುದನ್ನು ಕಂಡು ಆಕ್ರೋಶ ಗೊಂಡಿದ್ದ ಮಳಿಗೆಗಳ ಮಾಲೀಕರನ್ನು ಸಮತಾ ಸೈನಿಕ ದಳ ಮುಖಂಡ ಆರ್.ಶ್ರೀರಾಮಣ್ಣ ಹಾಗೂ ಮುಂತಾದವರನ್ನು ಸೇರಿದಂತೆ ಸಮಾಧಾನ ಪಡಿಸಿ ಯಾವುದೇ ರೀತಿಯ ಅನಾಹುತ ಆಗದಂತೆ ತಡೆದು ಸೂಕ್ತ ಬಂದೊ ಬಸ್ತು ಮಾಡಿ ಆರಕ್ಷಕ ವೃತ್ತ ನಿರೀಕ್ಷಕ ವೆಂಕಟೇಶ್ ಪರಿಸ್ಥಿತಿ ತಿಳಿಗೊಳಿಸಿದರು.

ಈ ಸಂದರ್ಭದಲ್ಲಿ ನಗರದ ಸಾರ್ವಜನಿಕರು ನಡೆದ ಘಟನೆಯನ್ನು ಮುಂದೇನಾಗುವುದೊ ಎಂದು ಕುತೂಹಲದಿಂದ ನೋಡುವುದರಲ್ಲಿ ಮಘ್ನರಾದರು. ದಿಬ್ಬೂರಹಳ್ಳಿ ಆರಕ್ಷಕ ನಿರೀಕ್ಷಕ ವಿಜಯ್ ರೆಡ್ಡಿ ,ನಗರ ಠಾಣೆ ಆರಕ್ಷಕ ನಿರೀಕ್ಷಕ ನವೀನ್ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪೋಲಿಸ್ ಬಂದೊ ಬಸ್ತು
ಮಾಡಲಾಗಿತ್ತು. ಘಟನೆ ನಡೆಯುವ ವೇಳೆ ಯಾವುದೇ ಕಾರಣಕ್ಕೂ ಅಲ್ಲಿಗೆ ನಗರಸಭೆಯ ಅದ್ಯಕ್ಷರಾಗಲಿ, ಸದಸ್ಯರುಗಳು ಹಾಗೂ ಶಾಸಕರು ಸೇರಿದಂತೆ ಯಾರು ಹಾಜರಾಗದೆ ಇರುವುದು ಕಂಡು ಮಳಿಗೆಯನ್ನು ಕೆಡವುತ್ತಿರುವುದರ ಬಗ್ಗೆ ಕೆಲವು ಅನುಮಾನಗಳಿಗೆ ಎಡೆ ಮಾಡಿಕೊಡುವಂತಾಯಿತು.

LEAVE A REPLY

Please enter your comment!
Please enter your name here