ಕಣ್ಣಿರೀಟ್ಟ ಮಾಜಿ ಸಚಿವ..!?

0
127

ಮಂಡ್ಯ/ಮಳವಳ್ಳಿ:2018 ರಂದು ನಡೆಯುವ ವಿದಾನಸಭೆ ಚುನಾವಣೆ ನನ್ನ ಕಡೆಯ ಚುನಾವಣೆ ಮೂರು ಬಾರಿ ನನ್ನನ್ನು ಸೋಲಿಸಿದ್ದಿರೀ ಈ ಬಾರಿ ನನ್ನನ್ನು ಗೆಲ್ಲಸಿ ಇಲ್ಲದಿದ್ದರೆ ನಾನು ಬದುಕಲಾರೆ ಎಂದು ಮಾಜಿ ಸಚಿವ ಬಿ.ಸೋಮಶೇಖರ. ಕಣ್ಣಿರೀಟ್ಟ ಪ್ರಸಂಗ ಜರುಗಿತು. ಮಳವಳ್ಳಿ ತಾಲ್ಲೂಕಿನ ನಿಡಘಟ್ಟ ಬಳಿವಿರುವ ರಾವಳೇಶ್ವರ ದೇವಸ್ಥಾನದ ಆವರಣದಲ್ಲಿ ಬಿಜೆಪಿ ಪಕ್ಷದವತಿಯಿಂದ ಹಿಂದುಳಿದ ವರ್ಗಗಳ ಸಮಾಲೋಚನೆ ಸಭೆ ಯಲ್ಲಿ ಮಾತನಾಡಿ. 16ವರ್ಷಗಳ ಅಧಿಕಾರಿ ನೀಡಿದ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಎಷ್ಟು ಅಭಿವೃದ್ಧಿ ಯಾಗಿದೆ ನಂತರ ಇದುವರೆಗೂ ನೀವು ನೋಡಿದ್ದಿರಿ, ಎಂದರು. ಮೋದಿ ಮಾಡುತ್ತಿರುವ ಯೋಜನೆಗಳನ್ನು 30 ವರ್ಷಗಳ ಹಿಂದೆ ನಾನು ಅಧಿಕಾರದಲ್ಲಿದ್ದಾಗ ಮಾಡಿದ್ದೆ ಎಂದರು. ಇದೇ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಡಾ.ಶ್ರೀಧರ್ ಮಾತನಾಡಿ, ಹಿಂದುಳಿದ ವರ್ಗ ಹಾಗೂ ಅಹಿಂದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದು ಸಾದನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಹಿಂದುಳಿದ ವರ್ಗಗಳ ಅಭಿವೃದ್ಧಿ ಯಾಗಬೇಕಾದರೆ ಬಿಜೆಪಿ ಯಿಂದ ಮಾತ್ರಸಾಧ್ಯ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವಂತೆ ಕರೆ ನೀಡಿದರು. ಕಾರ್ಯಕ್ರಮ ದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪುಟ್ಟಸಿದ್ದೇಗೌಡ, ಬಸವೇಗೌಡ, ತಾಲ್ಲೂಕು ಉಪಾಧ್ಯಕ್ಷ ಕೃಷ್ಣ, ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here