ಕಣ್ಮನ ಸೆಳೆದ ಲಂಬಾಣಿಗರ ಸಸಿಹಬ್ಬ..

0
340

ಬಾಗಲಕೋಟೆ :ತಲೆ ಮೇಲೆ ಸಸಿಗಳನ್ನು ಹೊತ್ತ ಯುವತಿಯರು, ಕಲರ ಕಲರ್ ಬಟ್ಟೆ ತೊಟ್ಟು ಬಂಜಾರ ಸಮಾಜದ ಮಹಿಳೆಯರು, ಇವುಗಳ ಮಧ್ಯೆ ಜಾನಪದ ಹಾಡಿನೊಂದಿಗೆ ದಾರಿಯುದ್ದಕ್ಕೂ ಸ್ಟೆಪ್ ಹಾಕ್ತಿರೋ ಯುವಕರು. ಇಂತಹದ್ದೊಂದು ವಿಶೇಷತೆ ಕಂಡು ಬಂದಿದ್ದು ಬಾಗಲಕೋಟೆಯ ಜಿಲ್ಲೆಯ ಮುಚಖಂಡಿ ತಾಂಡಾದಲ್ಲಿ ನಡೆದ ಸಸಿ ಹಬ್ಬದಲ್ಲಿ. ಸಸಿ ಹಬ್ಬ ಲಂಬಾಣಿ ಜನಾಂಗದವರೂ ವಿಶೇಷವಾಗಿ ಗಣೇಶ ಚತುರ್ಥಿ ಬಳಿಕ ಆಚರಿಸುವಂತಹ ಅಪರೂಪದ ಹಬ್ಬ. ಇನ್ನು ಮದುವೆಯಾಗದ ಹೆಣ್ಣು ಮಕ್ಕಳು ಪಾಲ್ಗೊಳ್ಳುವ ಅಪರೂಪದ ಹಬ್ಬವಾಗಿದ್ದು, ಸಂಪ್ರದಾಯದಂತೆ ಯುವತಿಯರು ತಮ್ಮೂರ ಹಳ್ಳಕೆ ಹೋಗಿ ಪೂಜೆ ಸಲ್ಲಿಸಿ ಬಿದಿರಿನ ಬುಟ್ಟಿಯಲ್ಲಿ ಮಣ್ಣು ತುಂಬಿಕೊಂಡು ಬಂದು ಅದರಲ್ಲಿ ಗೋದಿ ಸಸಿಗಳನ್ನು ಬೆಳೆಸುತ್ತಾರೆ. ಎಂಟನೇ ದಿನಕ್ಕೆ ಹುಲಸಾಗಿ ಸಸಿ ಬೆಳೆದಾಗ ಅವುಗಳಿಗೆ ವಿಶೇಷ ಪೂಜೆ, ಉಪವಾಸ, ರಾತ್ರಿ ಜಾಗರಣೆ ಮಾಡುತ್ತಾರೆ. ಒಂಬತ್ತನೇ ದಿನ ಸಸಿಗಳನ್ನು ಹಾಗೂ ಕನ್ನೆಯರೇ ಮಣ್ಣಿನಿಂದ ತಯಾರಿಸಿದ್ದ ಗೌರಿ ಹಾಗೂ ಜಗನ್ನಾಥನ ಮೂರ್ತಿಗಳ ಮೆರವಣಿಗೆ ತಾಂಡಾದ ತುಂಬೆಲ್ಲಾ ಮಾಡುತ್ತಾರೆ ಹೀಗೆ ಮಾಡುವದರಿಂದ ಮದುವೆಯಾಗದ ಯುವತಿಯರಿಗೆ ಒಳ್ಳೆಯ ವರ ಸಿಗುತ್ತಾನೆಂಬ ನಂಬಿಕೆ ಇಲ್ಲಿದೆ. ಇದೇ ವೇಳೆ ಬಂಜಾರ ಜನಾಂಗದ ಮಹಿಳೆಯರು ನೃತ್ಯ-ಹಾಡು ಎಲ್ಲರ ಗಮನ ಸೆಳೆಯಿತು.
ಇನ್ನು ಪ್ರತಿ ಮನೆಯಿಂದಲೂ ಸಸಿಗಳನ್ನ ಹೊತ್ತು ಹೆಣ್ಣು ಮಕ್ಕಳು ಊರು ತುಂಬ ಮೆರವಣಿಗೆ ಮೂಲಕ ಗೌಡರ ಮನೆಗೆ ತೆರಳುತ್ತಾರೆ. ಬಳಿಕ ಒಂದೆಡೆ ಸ್ಥಳದಲಿ ಸೇರುವ ಮೂಲಕ ತಂದಿದ್ದ ಸಸಿಗಳಲ್ಲಿರುವ ಎಸಳುಗಳನ್ನ ಪಡೆದು ಊರ ಜನ್ರು ಸಂಭ್ರಮಿಸುತ್ತಾರೆ. ನಂತರ ತಮ್ಮೂರ ದೇವಸ್ಥಾನದವರೆಗೂ ಮೆರವಣೆಗೆ ನಡೆಸಿ, ನಂತರದಲ್ಲಿ ಸಸಿಗಳನ್ನು ಪರಸ್ಪರ ಹಂಚಿಕೊಳ್ತಾರೆ. ಬಳಿಕ ೯ ದಿನಗಳವರೆಗೆ ಕಾಯ್ದುಕೊಂಡು ಬೆಳೆಸಿಕೊಂಡ ಬಂದ ಸಸಿಗಳನ್ನ ಬಾವಿಗಳಿಗೆ ಬಿಡುವ ಮೂಲಕ ಸಸಿ ಹಬ್ಬ ಮುಕ್ತಾಯಗೊಳ್ಳುವುದು. ಈ ಮಧ್ಯೆ ಹಾಡು ನೃತ್ಯದಲ್ಲಂತೂ ಯುವತಿಯರು, ಯುವಕರು, ಮಹಿಳೆಯರು ವಯಸ್ಸಿನ ಭೇದ ಮೆರೆತು ಕುಣಿದು ಕುಪ್ಪಳಿಸೋದು ಮಾತ್ರ ಎಲ್ಲರ ಮನರಂಜನೆಗೆ ಕಾರವಾಗುತ್ತಿದ್ದು, ಇದು ಹಿಂದಿನ ಬಂದ ಸಂಪ್ರದಾಯ ಅಂತಾರೆ ಲಂಬಾಣಿ ಮಹಿಳೆಯರು. ಲಂಬಾಣಿ ಜನಾಂಗದ ಸಾಂಸ್ಕೃತಿಕ ಹಬ್ಬವಾದ ಸಸಿ ಹಬ್ಬ ಹೆಣ್ಣಮಕ್ಕಳ ಹಬ್ಬವಾಗಿದ್ದು. ಮದುವೆ ಯಾಗದ ಯುವತಿಯರು ಈ ರೀತಿ ಹಬ್ಬ ಆಚರಣೆ ಮಾಡುವದರಿಂದ ಮದುವೆ ಯಾಗದವರಿಗೆ ಮದುವೆಯಾಗುತ್ತೆ ಎಂಬ ನಂಬಿಕೆ ಇದ್ದು, ಆಧುನಿಕತೆ ಭರಾಟೆಯಲ್ಲೂ ಲಂಬಾಣಿಗರು ತಮ್ಮ ಸಂಪ್ರದಾಯವನ್ನ ಮೆರೆಯುತ್ತಿರೋದು ಮಾತ್ರ ಅಭಿಮಾನದ ಸಂಗತಿ.

LEAVE A REPLY

Please enter your comment!
Please enter your name here