ಕಥೆಗಾರ… ಕಾಗೋಡು ತಿಮ್ಮಪ್ಪ

0
130

ಬಳ್ಳಾರಿ: ಕಾಗೋಡು ಚಳುವಳಿ ನಡೆಯುವಾಗಲೂ ಪತ್ರಕರ್ತರು ಹೇಗಿದ್ರೂ ಅಂತ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಬಳ್ಳಾರಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಒಂದು ಸ್ವಾರಸ್ಯಕರ ಘಟನೆಯ ಕತೆ ಹೇಳಿದ್ರು. ಅದೇನ್ ಗೊತ್ತಾ?

ಅಂದು ಲೋಹಿಯಾ ಅವ್ರನ್ನ ಮಾಧ್ಯಮದವ್ರು ಹೇಗೆ ನಡೆಸಿಕೊಂಡ್ರು ಅನ್ನೋದನ್ನ ನೆನಪಿಸಿಕೊಳ್ಳುತ್ತಾ, ಕಾಗೋಡು ಚಳುವಳಿ ಆಗ ಬಹಳ ಗಂಭೀರತೆ ಪಡೆದಿತ್ತು. ಅಂದಿನ ” ಪ್ರಜಾಮತ “ಪತ್ರಿಕೆಯ ಸಂಪಾದಕ ಗುರುಪಾದಸ್ವಾಮಿ ನಮ್ಮ ಊರಿಗೆ ಭೇಟಿ ನೀಡಿದ್ರು. ಊರಿಗೆ ಎಂಟ್ರಿ ಆದ ಸಂದರ್ಭದಲ್ಲಿ ಒಬ್ಬ ಕೋಳಿ ಹಿಡ್ಕಂಡಿದ್ದ. ಅದನ್ನು ಫೋಟೋ ತೆಗೆದಿದ್ರು. ಮುಂದೆ ನಡೆದಾಗ ಒಂದು ಓಣಿಯಲ್ಲಿ ಮದುವೆ ಇತ್ತು. ಆ ಮದುವೆ ಮನೇಲಿ ಮಹಿಳೆಯರು ಸಂಭ್ರಮದಲ್ಲಿದ್ರು. ಅದನ್ನೂ ಫೋಟೋ ತೆಗೆದ ಪ್ರಜಾಮತ ಸಂಪಾದಕರು ಇಲ್ಲಿ ಕಾಗೋಡು ಚಳುವಳಿ ಹೋರಾಟವಿಲ್ಲ. ಜನ್ರು ಖುಷಿ ಆಗಿದ್ದಾರೆ ಅಂತ ಬರೆದ್ರು. ಹೀಗಾಗಿ, ಇಂದಿನ ಪತ್ರಕರ್ತರು ಏನು ಬೇಕಾದ್ರೂ ಬರೀರಿ. ಟಿವೀಲಿ ತೋರಸ್ರಿ. ಆದರೆ, ನೀವೇ ಜಡ್ಜಮೆಂಟ್ ಕೊಡೋಕೆ ಹೋಗಬೇಡಿ ಅಂದ್ರು.

LEAVE A REPLY

Please enter your comment!
Please enter your name here