ಕದಿಯೋದ್ರಲ್ಲಿ ಬಿಜಿಯಾದ್ರಾ…?

0
189

ಬೆಂಗಳೂರು/ಹೊಸಕೋಟೆ:- ಮೊಟ್ಟೆ ಆಯ್ತು, ಪೆಟ್ರೋಲ್ ಆಯ್ತು, ಅಡುಗೆ ಎಣ್ಣೆನೂ ಆಯ್ತು ಈಗ ಕ್ಯಾರೇಟ್ ಸರದಿ, ಕ್ಯಾರೇಟ್ ತುಂಬಿದ ಲಾರಿ ಪ್ಯಾಸಿಂಜರ್ ಗಳನ್ನು ಹೊತ್ತೊಯ್ಯುವ ಟಾಟಾ ಎಸ್ ಗೆ ಡಿಕ್ಕಿ ಹೊಡೆದಿದೆ. ಇದರಿಂದ ಲಾರಿ ಮತ್ತು ಟಾಟಾ ಎಸ್ ಗಳೆರಡೂ ರಸ್ತೆಯಲ್ಲೆ ಮಗಚಿ ಬಿದ್ದಿವೆ. ಇದರ ಪರಿಣಾಮ ಸಂಚಾರ ಸಂಪೂರ್ಣ ಸ್ಥಿಗಿತಗೊಂಡಿತ್ತು, ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗಿತ್ತು, ಸಂಚಾರ ದಟ್ಟಣೆ ನಿವಾರಿಸಲು ನಂದಗುಡಿ ಪೊಲೀಸರ ಹರ ಸಾಹಸ ಪಟ್ಟರು, ಇನ್ನು ಅಪಘಾತಕ್ಕೀಡಾಗಿ ಅವರ ಕಷ್ಟದಲ್ಲಿ ಅವರಿದ್ದರೆ ಕೆಲವರು ಕ್ಯಾರೇಟ್ ಬಾಚಿದಕೊಂಡು ಪರಾರಿ ಆದರು. ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿವನಾಪುರ ಗೇಟ್ ಬಳಿ ನಡೆದಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಟಾಟಾ ಎಸ್ ಚಾಲಕ ಮಾತ್ರ ಗಂಭೀರ ಗಾಯಗೊಂಡಿದ್ದು ಅಸ್ಪತ್ರೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here