ಕನಕದಾಸರ ಕೀರ್ತನೆಗಳು ಸರ್ವಶ್ರೇಷ್ಠ

0
305

ಬಳ್ಳಾರಿ /ಹೊಸಪೇಟೆ ; ಕನ್ನಡ ಸಾಹಿತ್ಯಕ್ಕೆ ತಮ್ಮ ಕೀರ್ತನೆಗಳ ಮೂಲಕ ಅನರ್ಘ್ಯ ಕೊಡುಗೆಯನ್ನು ನೀಡಿದವರು ಮತ್ತು ದಾಸ ಸಾಹಿತ್ಯದ ಶ್ರೇಷ್ಠದಾಸರಲ್ಲಿ ಕನಕದಾಸರು ಪ್ರಮುಖರು ಎಂದು ಶಾಸಕ ಆನಂದ್ ಸಿಂಗ್ ಹೇಳಿದರು..
ಕನಕದಾಸರ ಜಯಂತಿ ಪ್ರಯುಕ್ತ ಕನಕದಾಸರ ಪುತ್ತಳಿಗೆ ಮಾಲಾರ್ಪಣೆ ಮಾಡಿದ ಬಳಿಕ
ತಾಲೂಕು ಆಡಳಿತದ ವತಿಯಿಂದ ಆಯೋಜಿಸಲಾದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನಕದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತ ಅಲ್ಲದೇ ಅವು ಮನುಜ ಕುಲವನ್ನು ಸನ್ಮಾರ್ಗದತ್ತ ಕೊಂಡೊಯುತ್ತವೆ.
“ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ” ಎಂಬ ಕಾವ್ಯದ ಭಾವಾರ್ಥ ತಿಳಿದುಕೊಂಡಾಗ ಮಾತ್ರ ಜೀವನ ಸಾರ್ಥಕ ಎಂದರು..
ಸಣ್ಣಕ್ಕಿ ವೀರಭದ್ರ ದೇವಸ್ಥಾನದಿಂದ ನಗರಸಭೆ ಆವರಣದವರೆಗೆ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು..
ಈ ವೇಳೆ ನಗರಸಭೆ ಅಧ್ಯಕ್ಷೆ ,ನಾಗಲಕ್ಷಮ್ಮ, ತಾ.ಪಂ ಅಧ್ಯಕ್ಷೆ ಜೋಗದ ನೀಲಮ್ಮ,ಆಯುಕ್ತರು ಪ್ರಶಾಂತ್ ಕುಮಾರ್ ಮಿಶ್ರಾ,ತಹಶಿಲ್ದಾರ ವಿಶ್ವನಾಥ ಸೇರಿದಂತೆ ಕುರುಬ ಸಮಾಜದ ಮುಖಂಡರಾದ ಎಲ್ ಸಿದ್ದನ ಗೌಡ ಅಯ್ಯಳಿ ತಿಮ್ಮಪ್ಪ ಬರಮಲಿಂಗನ ಗೌಡ ನಗರ ಸಭೆ ಸದ್ಯಸರಾದ ಟಿ ಚಿದನಂದ ಗೌಡ್ರ ರಮಚಂದ್ರ ಡಾ. ಚಲುವರಾಜ ವಿಶೇಷ ಉಪನ್ಯಾಸ ನೀಡಿದರು ಬೆಳ್ಳಿಗ್ಗೆ ಹಂಪಿಯಿಂದ ಸಮಾಜದ ಯುವಕರು ಬೈಕ್ ಮೂಲಕ ಜೋತ ತಂದರು

LEAVE A REPLY

Please enter your comment!
Please enter your name here