ಕನಕ ದಾಸರ ಜಯಂತಿ ಮಹೋತ್ಸವ..

0
237

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:530 ನೇ ದಾಸಶ್ರೇಷ್ಠ ಕನಕ ದಾಸರ ಜಯಂತಿ ಮಹೋತ್ಸವ ನಾಡ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ವಿಜೃಂಭಣೆಯಿಂದ ನಡೆಯಿತು.ಕೀರ್ತನೆಗಳ ಮೂಲಕ ದಾಸಶ್ರೇಷ್ಠರಾದ ವ್ಯೆಕ್ತಿ ಕನಕದಾಸ ಎಂದು ಶಾಸಕ ಎಂ. ರಾಜಣ್ಣ ತಿಳಿಸಿದರು.ಭಕ್ತಿಯಿಂದ ದೇವರನ್ನೇ ತನ್ನ ಕಡೆ ತಿರುಗುವಂತೆ ಮಾಡಿದ ಮಹಾ ಭಕ್ತ ಕನಕದಾರು ಎಂದು ಮುಖ್ಯ ಭಾಷಣದಲ್ಲಿ ಸಿಟಿಜನ್ ಡಿ.ಇಡಿ.ಕಾಲೇಜು ಪ್ರಾಂಶುಪಾಲ ಎನ್. ಶಿವಣ್ಣ ತಿಳಿಸಿದರು.ವೇದಿಕೆಯಲ್ಲಿ ಕುರುಬ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ಮುಖಂಡರಿಗೆ ಸನ್ಮಾನ.ಹಾಲು ಮತಸ್ಥರಿಂದ ತಲೆಯ ಮೇಲೆ ತೆಗಿನಕಾಯಿ ಒಡೆಯುವ ಸಂಪ್ರದಾಯ ವಿನೂತನ ಕಾರ್ಯಕ್ರಮ.ಬೆಳ್ಳೆ ಪಲ್ಲಕ್ಕಿಗಳಲ್ಲಿ ಕನಕದಾಸರ ಭಾವಚಿತ್ರಗಳು ಮೆರವಣಿಗೆಯಲ್ಲಿ ಮಹಿಳಾ ವೀರಗಾಸೆ, ಡೊಳ್ಳುಕುಣಿತ,ಕೀಲುಕುದುರೆ ನೃತ್ಯಗಳಿಂದ ಪ್ರದರ್ಶನ.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಾದ್ಯಕ್ಷೆ ಪಿ. ನಿರ್ಮಲ ಮುನಿರಾಜು, ನಗರಸಭೆ ಪ್ರಭಾರ ಅಧ್ಯಕ್ಷರು ಪ್ರಭಾವತಿ ಸುರೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಕ್ಷ್ಮಿನಾರಾಯಣರೆಡ್ಡಿ,ನಗರಸಭೆ ಪೌರಾಯುಕ್ತ ಚಲಪತಿ, ಕುರುಬ ಸಂಘದ ರಾಜ್ಯ ನಿರ್ದೇಶಕ ಎ.ನಾಗರಾಜು, ಗ್ರೇಟ್ 2 ತಹಶೀಲ್ದಾರ್ ವಾಸುದೇವಮೂರ್ತಿ, ಕುರುಬ ಸಂಘದ ಅಧ್ಯಕ್ಷ ಮಂಜುನಾಥ್ ಹಾಗೂ ಮುಂತಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here