ಕನ್ನಡೇತರರಿಗೆ ಕನ್ನಡ ಕಲಿಸಿ….

0
232

ಬಳ್ಳಾರಿ /ಹೊಸಪೇಟೆ: ಕನ್ನಡದ ಜ್ಞಾನವನ್ನು ವಿಶ್ವಕ್ಕೆ ತಿಳಿಸುವ ಪ್ರಯತ್ನದಲ್ಲಿ ಕನ್ನಡ ವಿವಿ ತನ್ನನ್ನು ಸಕರಾತ್ಮಕವಾಗಿ ತೊಡಗಿಸಿಕೊಂಡಿದ್ದು, ಕನ್ನಡ ಕಂಪನ್ನು ವಿಶ್ವದೆಲ್ಲೆಡೆ ಪಸರಿಸಲು ಅಗತ್ಯ ಕ್ರಮಕೈಗೊಳ್ಳಲಿ, ಕನ್ನಡ ಉಳಿವು, ಬೆಳವಣಿಗೆಗೆ ಅಗತ್ಯ ಸಹಕಾರ ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿ ಹಬ್ಬ-2017ರ ಸಂಭ್ರಮ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಅಭಿವೃದ್ಧಿಗೆ ಮೂಲಭೂತ ಸೌಲಭ್ಯ, ಸಂಪನ್ಮೂಲಗಳಿಗಾಗಿ ಕುಲಪತಿಗಳು 100 ಕೋಟಿ ರು. ಬೇಡಿಕೆ ಇಟ್ಟಿದ್ದರು. ಅಂದೇ 25 ಕೋಟಿ ರು ಬಿಡುಗಡೆ ಮಾಡುವುದಾಗಿ ಮಾತು ಕೊಟ್ಟಿದ್ದೆ, ಅದನ್ನು ಬಿಡುಗಡೆ ಮಾಡಲಾಗಿದೆ. ಇಲ್ಲಿ ದೇವರು, ಪೂಜಾರಿಯೂ ಅಂತಿಲ್ಲ. ಹಣ ಶೀಘ್ರದಲ್ಲಿ ತಮಗೆ ತಲುಪಲಿದೆ. ಎಸ್ಸಿ ಎಸ್ಟಿ ಮಹಿಳೆಯರಿಗೆ ಪ್ರತ್ಯೇಕ ವಸತಿ ನಿಲಯಗಳನ್ನು ನಿರ್ಮಿಸಲು ಈಗಾಗಲೇ ಅನುದಾನ ನೀಡಲಾಗಿದೆ. ಹಿಂದುಳಿದ ವರ್ಗಗಳ ತಲಾ 100 ವಿದ್ಯಾರ್ಥಿ, ವಿದ್ಯಾರ್ಥಿನಿಯ ವಸತಿ ನಿರ್ಮಿಸಲು ಸಮಾಜ ಕಲ್ಯಾಣ ಸಚಿವರಿಗೆ ಸೂಚಿಸಲಾಗಿದೆ. ವಿವಿಯಲ್ಲಿ  ಖಾಲಿ ಇರುವ 181 ಹುದ್ದೆಗಳ ಪೈಕಿ ಅಗತ್ಯವಿರುವ ಹುದ್ದೆಗಳ ಭರ್ತಿಗೆ ಪ್ರಸ್ತಾವನೆ ಕಳಿಸಿದರೆ ಶೀಘ್ರವೇ ಭರ್ತಿ ಮಾಡಲಾಗುವುದು. ಕನ್ನಡ ವಿವಿಗೆ ಬೆಂಗಳೂರಿನಲ್ಲಿ ನೀಡಲಾದ 17 ಎಕರೆಯಲ್ಲಿ ರಂಗ ಕಲೆ ನಿರ್ಮಾಣಕ್ಕೂ ಅಗತ್ಯ ಸಹಕಾರ ನೀಡಲಾಗುತ್ತದೆ. ಕನ್ನಡೇತರರಿಗೆ ಕನ್ನಡವನ್ನು ಕಲಿಸುವಂತ ಕೆಲಸವಾಗಬೇಕು. ವಿಜಯನಗರ ಸಾಮ್ರಾಜ್ಯದಲ್ಲಿಯೂ ಭಾಷೆ, ಸಂಸ್ಕøತಿ ಬೆಳವಣಿಗೆ ನೀಡಿದ ಸಹಕಾರದಂತೆ ನಮ್ಮ ಸರ್ಕಾರವೂ ಕನ್ನಡ ಸಂಸ್ಕøತಿ ಬೆಳವಣಿಗೆಗೆ ಬೆನ್ನೆಲೆಬಾಗಿ ನಿಲ್ಲುತ್ತದೆ. ಕನ್ನಡ ಏಕೀಕರಣದ ವೇಳೆ ಇಟ್ಟುಕೊಂಡ ಆಶಯಗಳನ್ನು ಈಡೇರಿಸಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಇಡೀ ವಿಶ್ವದಲ್ಲಿಯೆ ಉನ್ನತವಾದ ಸ್ಥಾನ ದೊರೆಯುವಂತೆ ಎಲ್ಲರು ಕೆಲಸಮಾಡಬೇಕು. ವಿಜ್ಞಾನ ಕಲೆ ವಾಣಿಜ್ಯ ಸೇರಿದಂತೆ ಎಲ್ಲಾ ಜ್ಞಾನವನ್ನು ಕನ್ನಡ ಮಾಧ್ಯಮದಲ್ಲಿ ಕಲಿಸಬೇಕು. ತಂತ್ರಜ್ಞಾನಕ್ಕೂ ಕನ್ನಡ ಟಚ್ ನೀಡಬೇಕು. ಕನ್ನಡ ಭಾಷೆ ಬೆಳವಣಿಗೆ ಉಳಿವಿಗಾಗಿ ಕನ್ನಡ ವಿಶ್ವವಿದ್ಯಾಲಯ ಹುಟ್ಟಿಕೊಂಡಿದೆ. ಇನ್ನಷ್ಟು ಕೆಲಸಗಳು ಆಗಬೇಕಿದೆ ಎಂದು ಹೇಳಿ ನಾಡಿನ ಎಲ್ಲಾ ಕನ್ನಡರಿಗೆ, ಅಭಿಮಾನಿಗಳಿಗೆ ಶುಭಾಶಯಗಳನ್ನು ಕೋರಿದರು.

ಕನ್ನಡ ವಿವಿ ಕುಲಪತಿ ಡಾ.ಮಲ್ಲಿಕಾ ಎಸ್.ಘಂಟಿ ಮಾತನಾಡಿ, ವಿಶ್ವವ್ಯಾಪ್ತಿಯನ್ನು ಹೊಂದಿರುವ ಕನ್ನಡ ವಿಶ್ವವಿದ್ಯಾಲಯವನ್ನು ಸಾಂಪ್ರದಾಯಿಕ ವಿಶ್ವವಿದ್ಯಾಲಯದಂತೆ ಭಾವಿಸುವುದು ಸರಿಯಾದ ಕ್ರಮವಲ್ಲ. ಹೀಗಾಗಿ ಸರಕಾರ ಕನ್ನಡ ವಿಶ್ವವಿದ್ಯಾಲಯದ ಆಶಯಗಳ ಈಡೇರಿಕೆಗಾಗಿ ಮಾನವ ಸಂಪನ್ಮೂಲ ಮತ್ತು ಆರ್ಥಿಕ ಸಂಪನ್ಮೂಲವನ್ನು ನೂರು ಕೋಟಿ ರೂ. ಅನುದಾನಕ್ಕೆ ಹೆಚ್ಚಿಸಬೇಕಾಗಿದೆ ಎಂದರು

LEAVE A REPLY

Please enter your comment!
Please enter your name here