ಕನ್ನಡ ಭಾಷೆ ಕಲಿಯಲು ಜಾಗೃತಿ ಅಭಿಯಾನ …

0
105

ಬೆಂಗಳೂರು/ಮಹದೇವಪುರ:– ಕನ್ನಡ ಕನ್ನಡ ಬನ್ನಿ ನಮ್ಮ ಸಂಘಡ ಎಂಬಂತೆ ಕನ್ನಡ ಭಾಷಾ ಅಭಿಮಾನವನ್ನು ಪ್ರತಿಯೊಬ್ಬರು ರೂಢಿಸಿಕೊಂಡು ಕನ್ನಡ ಕಲಿಯಬೇಕು ಎಂದು ಬೆಂಗಳೂರು ರಕ್ಷಣೆ ವೇದಿಕೆ ಅಧ್ಯಕ್ಷ ರಾಜೇಶ್ ತಿಳಿಸಿದರು.
ಮಹದೇವಪುರ ಕ್ಷೇತ್ರದ ವರ್ತೂರು ಕೋಡಿ ಬಳಿಯಿರುವ ವೈಟ್ ಫೀಲ್ಡ್ ಪೋರಂ ಮಾಲ್ ಮುಂಭಾಗದಲ್ಲಿ ಬೆಂಗಳೂರು ರಕ್ಷಣ ವೇದಿಕೆ ಕಾರ್ಯಕರ್ತರು ಕನ್ನಡ ಉಳಿಸಿ, ಕನ್ನಡ ಕಳಿಸಿ ಎಂದು ಮಾಲ್ ಮುಂಭಾಗದಲ್ಲಿ ಕನ್ನಡ ಅಭಿಮಾನ ಬೆಳೆಸಿಕೊಳ್ಳಲು ಜಾಗೃತಿ ಮೂಡಿಸುವ ಕಾರ್ಯಕ್ರಮನ್ನು ಹಮ್ಮಿಕೊಂಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸ್ಥಳೀಯ ಮುಖಂಡರು ಹಾಗೂ ಕನ್ನಡ ಪ್ರೇಮಿಗಳಾದ ಆಂಟೋನಿ ಸುಂದರ್ ಮಾತನಾಡಿ, ನಾಡು,ನುಡಿ ಭಾಷೆಯ ಬಗ್ಗೆ ಪ್ರತಿಯೊಬ್ಬರು ಅಭಿಮಾನ‌ ಬೆಳಸಿಕೊಳಬೇಕು, ಕನ್ನಡ ಭಾಷೆಯ ನಮಫಲಕಗಳನ್ನು ಹಿಡಿದು ಪರಭಾಷಿಕರಿಗೆ ಕನ್ನಡದ ಬಗ್ಗೆ ಪ್ರೀತಿ ಹಾಗೂ ಅಭಿಮಾನ ಬೆಳಸುವ ಉದೇಶದಿಂದ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಬೆ.ರ.ವೇ ಕಾರ್ಯಕರ್ತರು ಪ್ರತಿ ವಾರಕ್ಕೊಮ್ಮೆ ಮಾಲ್’ಗಳ ಮುಂಭಾಗದಲ್ಲಿ ಇಂತಹ ಜಾಗೃತಿ ಅಭಿಯಾನಗಳನ್ನು ಆಯೋಜಿಸಬೇಕು ಇವರ ಕಾರ್ಯ ಮುಂದುವರೆಯಲು ಸದಾ ನಮ್ಮ ಬೆಂಬಲ ಇರಲ್ಲಿದೆ ಎಂದರು‌.

ಬೆ.ರ.ವೇ ಅಧ್ಯಕ್ಷ ಮಾತನಾಡಿ, ಕನ್ನಡದ ಉಳಿವಿಗಾಗಿ, ಪರಭಾಷಿಕರಿಗೆ ಕನ್ನಡ ಕಲಿಸುವ ಉದೇಶೆದೊಂದಿದೆ, ಕನ್ನಡಕ್ಕಾಗಿ ನಮ್ಮ ಸಂಘವೂ ಸದಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಗುತದ್ದೆ, ಕನ್ನಡ ಕನ್ನಡ ಬನ್ನಿ ನಮ್ಮ ಸಂಘಡ ಎಂಬಂತೆ ಕನ್ನಡ ಭಾಷಾ ಅಭಿಮಾನವನ್ನು ಪ್ರತಿಯೊಬ್ಬರು ರೂಢಿಸಿಕೊಂಡು ಕನ್ನಡ ಕಲಿಯಬೇಕು ಎಂದು ತಿಳಿಸಿದರು‌‌.

ಈ ಸಂದರ್ಭಗಳಲ್ಲಿ ಬೆ.ರ.ವೇ ಕಾರ್ಯಕರ್ತರಾದ ಅಕ್ಷಯ್, ಗಿರೀಶ್, ಮಾರ್ಟಿನ್ ಮತ್ತು ಸ್ಥಳೀಯ ಅಟೋ ಚಾಲಕರ ಸಂಘದವರು ಮುಂತಾದವರು ಭಾಗವಹಿಸಿದರು.

LEAVE A REPLY

Please enter your comment!
Please enter your name here