ಕನ್ನಡ ರಾಜ್ಯೋತ್ಸವ ಹಿನ್ನೆಲೆ,ಪೂರ್ವಭಾವಿ ಸಭೆ..

0
458

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ತಾಲ್ಲೂಕು ಆಡಳಿತ ಮತ್ತು ವಿವಿಧ ಕನ್ನಡಪರ ಹಾಗೂ ಇನ್ನಿತರ ಎಲ್ಲಾ ಸಮುದಾಯ ಹಾಗೂ ಸಂಘಟನೆಗಳಿಂದ ನವಂಬರ್ 1 ರಂದು ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ನಗರದಲ್ಲಿ ಮಾಡಲು ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.ತಹಶೀಲ್ದಾರ್ ಅಜಿತ್ ಕುಮಾರ್ ರೈ ಮಾತನಾಡಿ ರಸ್ತೆಗಳಲ್ಲಿ ಕಟ್ಟುವ ಕನ್ನಡ ಬಾವುಟ ಹಾಗೂ ತೊರಣಗಳು ಬಟ್ಟೆ ಅಥವಾ ಪೇಪರ್ ನಿಂದ ಕೂಡಿರಬೇಕು ಪ್ಲಾಸ್ಟಿಕ್ ನಿಷೇಧಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಬಿಇಒ ಚಂದ್ರಶೇಖರ್ ಬಾಬು ಹಾಗೂ ಕನ್ನಡಪರ, ರೈತಪರ, ದಲಿತಪರ, ಹಾಗೂ ಮುಂತಾದ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here