ಕನ್ನ ಹಾಕಿ ನಗ-ನಗದು ದೋಚಿದ ಕಳ್ಳರು…

0
116

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರದ ಕೆ.ಆರ್ ಬಡಾವಣೆಯ ವಾರ್ಡ್ ನಂ 5 ನಾರಪ್ಪಕುಂಟೆ ಬಳಿ ಶಾಬಾಜ್ ಖಲಂದರ್ ಎಂಬುವರ ಮನೆಗೆ ಕನ್ನ ಹಾಕಿದ ಕಳ್ಳರು ನಗ ನಗದು ಚಿನ್ನ ,ಬೆಳ್ಳಿ , ಗ್ಯಾಸ್ ಸಿಲಿಂಡರ್ ಸೇರಿದಂತೆ ಇಪ್ಪತ್ತು ಸಾವಿರ ಹಣ ದೋಚಿ ಪರಾರಿಯಾಗಿರುವ ಘಟನೆ ಶುಕ್ರವಾರ ನಡೆದಿದೆ.

ಮಾಲೀಕ ಶಾಬಾಜ್ ಕಲಂದರ್ ಅವರ ಪತ್ನಿ ರಿಜ್ವಾನ ಅವರಿಗೆ ಏಕಾಏಕಿ ರಾತ್ರಿ ಕೈ ಮತ್ತು ಕಾಲಿಗೆ ಸ್ಟ್ರೋಕ್ ಆಗಿದ್ದ ಕಾರಣ ಅವರನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆ ಗೆ ರಾತ್ರಿಯೇ ಕರೆದುಕೊಂಡು ಹೋಗಿದ್ದು ಶುಕ್ರವಾರ ಹೋಗಿದ್ದು ಭಾನುವಾರ ಸಂಜೆ ಮನೆಗೆ ಬಂದಾಗ ಮನೆಯ ಬಾಗಿಲು ತೆಗೆದುರುವುದು ಗೋಚರವಾಗಿ ಮನೆಯೊಳಕ್ಕೆ ಹೋದಾಗ ಕಳ್ಳತನವಾಗಿರುವುದು ಬಹಿರಂಗವಾಗಿದೆ.

ಕಳ್ಳರು ಬೀರುವದಲ್ಲಿದ್ದ ಚಿನ್ನದ ಓಲೆ 7 ಗ್ರಾಂ, ಕೈ ಉಂಗುರ ಮೂರು 11 ಗ್ರಾಂ ಸುಮಾರು 180 ಗ್ರಾಂ ತೂಕದ ವಿವಿಧ ಚಿನ್ನಾಭರಣಗಳು ಒಂದು ಬೆಳ್ಳಿ ಉಂಗುರ ಆಭರಣಗಳು ಮತ್ತು ಪತ್ನಿಯ ಚಿಕಿತ್ಸೆ ಗಾಗಿ ಇಟ್ಟಿದ್ದ ಇಪ್ಪತ್ತು ಸಾವಿರ ರೂ ನಗದು ಮತ್ತು ಒಂದು ಹೆಚ್.ಪಿ.ಗ್ಯಾಸ್ ಸಿಲಿಂಡರ್ ದೋಚಿಕೊಂಡು ಹೋಗಿದ್ದಾರೆ. ವಿಷಯ ತಿಳಿದ ಕೂಡಲೇ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ನಂತರ ಭಾನುವಾರ ಸಂಜೆ ತಪಾಸಣೆ ಕೈಗೊಂಡಿದ್ದು ಯಾವುದೇ ಸುಳಿವು ಸಿಕ್ಕಿಲ್ಲ ಮನೆಯ ಮಾಲೀಕ ಶಾಬಾಜ್ ಖಲಂದರ್ ನೀಡಿದ ದೂರಿನ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here