ಕೆರೆ ಒತ್ತುವರಿ ಪತ್ತೆಗಾಗಿ ಸರ್ವೇ

0
208

ಬಳ್ಳಾರಿ /ಹೊಸಪೇಟೆ:  ಕೆರೆ ಒತ್ತುವರಿಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ತಾಲ್ಲೂಕಿನ ಎಲ್ಲಾ ಕೆರೆಗಳ ಸರ್ವೆ ನಡೆಸಿ, 15 ದಿನದೊಳಗೆ ಗಡಿ ರೇಖೆಯನ್ನು ಗುರುತಿಸುವ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಹೆಚ್.ವಿಶ್ವನಾಥ ಹೇಳಿದರು.

ಕೆರೆ ಅಭಿವೃದ್ಧಿ ಕುರಿತಂತೆ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ಆದೇಶದಂತೆ ತಾಲೂಕಿನಲ್ಲಿ ಇರುವ ಒಟ್ಟು 21 ಕೆರೆಗಳು ಅವುಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ ಒತ್ತುವರಿಯಾಗಿದ್ದರೆ ಸರ್ವೇ ಮಾಡಿ ಕೆರೆಗಳ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗುವುದು. ಕೆರೆ ಒತ್ತುವರಿ ತೆಡೆಗಾಗಿ ಬೌಂಡ್ರಿ ಕಲ್ಲುಗಳನ್ನು ಹಾಕಿ ಕೆರೆ ಪ್ರದೇಶವನ್ನು ಭದ್ರ ಪಡಿಸಲಾಗುವುದು. ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಮತ್ತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಸಮಿತಿವತಿಯಿಂದ ಕೆರೆ ಸರ್ವೇ ಕಾರ್ಯ ನಡೆಸಲಾಗುವುದು.ಯಾರೇ ಒತ್ತುವರಿ ಮಾಡಿದ್ದರೂ ಸರಿ ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಂಡು ಕೆರೆಗಳ ಪುನರ್ ಅಭಿವೃದ್ದಿಗೆ ಮುಂದಾಗುವುದಾಗಿ ಹೇಳಿದರು.

ಮಳೆ ಪ್ರಮಾಣ, ಇಳಿಮುಖವಾಗುತ್ತಿದ್ದು, ಇದರಿಂದ ಕೆರೆಗಳಲ್ಲಿ ನೀರು ನಿಲ್ಲುತ್ತಿಲ್ಲ, ರೈತರು ತಮ್ಮ  ಕೃಷಿ ಚಟುವಟಿಕೆ ಕೈಗೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಒತ್ತುವರಿ ಮಾಡಿದವರು ತಾವಾಗಿಯೇ ಕೆರೆಗೆ ಬಿಟ್ಟುಕೊಡಬೇಕಿದೆ. ಇಲ್ಲವಾದಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಈಗಾಗಲೇ ತಾಲೂಕಿನ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಈ ಕುರಿತು ಸಭೆ ಕರೆದು ಸೂಚಿಸಲಾಗಿದೆ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಕರೆಯನ್ನು ಉಳಿಸುವ ಪ್ರಯತ್ನ ಮಾಡಿ 15 ದಿನದೊಳಗೆ ಎಲ್ಲ ಕೆರೆಗಳ ಸರ್ವೇ ಪಟ್ಟಿಯನ್ನು ನೀಡುವಂತೆ ಸೂಚಿಸಲಾಗಿದೆ. ಕಮಲಾಪುರ ಪಟ್ಟಣ ಕೆರೆಯ ಒತ್ತುವರಿಯನ್ನು ಈಗಾಗಲೇ ಸರ್ವೇ ಮೂಲಕ ತೆರವು ಮಾಡಲಾಗಿದೆ. ಅಂದಾಜು 70 ಎಕ್ಕರೆ ಭೂಮಿಯನ್ನು ಒತ್ತುವರಿ ಮಾಡಲಾಗಿತ್ತು. ಸರ್ವೇ ನಡೆಸಿ, ಆ ಭೂಮಿಯನ್ನು ಕೆರೆಗೆ ಉಳಿಸಿಕೊಂಡಿದೆ. ಒಟ್ಟು 476 ಎಕರೆ ಪ್ರದೇಶದಲ್ಲಿ ಕಮಲಾಪುರ ಕೆರೆಯಲ್ಲಿ ವೈಜ್ಞಾನಿಕವಾಗಿ ಹೂಳು ತೆಗೆಯುವ ಕುರಿತು ಚಿಂತಿಸಲಾಗುತ್ತಿದೆ ಎಂದರು.

ಸಣ್ಣ ನೀರಾವರಿ ಇಲಾಖೆಯ ನಾಗೇಂದ್ರಪ್ಪ, ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಅಧಿಕಾರಿ ಮುತ್ತಯ್ಯ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಹಾಗೂ ಕಂದಾಯ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here