ಕರಡಿ ದಾಳಿಯಿಂದ ಕಾಪಾಡಿ

0
207

ತುಮಕೂರು/ಪಾವಗಡ: ತಾಲ್ಲೂಕಿನಲ್ಲಿ. ಇತ್ತೀಚಿಗೆ ಕರಡಿಗಳ ದಾಳಿ ಪದೇಪದೇ ನಡೆಯುತ್ತಿದ್ದು ಇದರ ಬಗ್ಗೆ ಅರಣ್ಯ ಇಲಾಖೆಯ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಇಂದು ನಿಡಗಲ್ ಹೋಬಳಿಯ ರೈತರು ಮತ್ತು ಗ್ರಾಮಸ್ಥರು ಪಾವಗಡ ನಗರದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳ ಲಾಗಿತ್ತು ಈ ಸಂದರ್ಭದಲ್ಲಿ ಮಾತನಾಡಿದ ರೈತ ಹೋರಾಟಗಾರ ರಾಮಸುಬ್ಬಯ್ಯ ಅರಣ್ಯ ಇಲಾಖೆ ಅಧಿಕಾರಗಳು ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಸರ್ಕಾರ ಇಂತಹ ಅಧಿಕಾರಗಳಿಗೆ ಸಂಬಳ ನೀಡುತ್ತಿರುವುದೇ ವ್ಯರ್ಥ ಎಂದರು.ಇವರಿಗೆ ಜನಸಾಮಾನ್ಯರ ಮತ್ತು ರೈತರಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಆರೋಪಿಸಿದರು. ಈ ಕೂಡಲೇ ಕರಡಿಗಳ ದಾಳಿಯಿಂದ ಆಸ್ಪತ್ರೆ ಪಾಲಾಗುತ್ತಿರುವ ಬಡ,ಕೂಲಿಕಾರ್ಮಿಕರ ಬಗ್ಗೆ ಕರುಣೆ ತೋರಿಸಿ ಎಂದರು ಈ ಕೂಡಲೇ ಕರಡಿ ದಾಳಿಗೆ ಬ್ರೇಕ್ ಹಾಕಲು ಮುಂದಾಗುವಂತೆ ಒತ್ತಾಯಿಸಿದರು.  ಪ್ರತಿಭಟನೆಯಲ್ಲಿ ರೈತ ಸಂಘದ ಅಧ್ಯಕ್ಷ  ಪುಜಾರಪ್ಪ.ಪಾಳ್ಲಗಾರ ಲೋಕೇಶ್. ಇತರೆ ನೂರಾರು ರೈತರು ಭಾಗಿಯಾಗಿದ್ದರು.⁠⁠⁠

LEAVE A REPLY

Please enter your comment!
Please enter your name here