ಕರಡಿ ದಾಳಿ.. ಇಬ್ಬರಿಗೆ ಗಾಯ

0
166

ಬಳ್ಳಾರಿ /ಹೊಸಪೇಟೆ: ಕರಡಿ ದಾಳಿಗೆ ಇಬ್ಬರು ವ್ಯಕ್ತಿಗಳು ಗಾಯಗೊಂಡ ಘಟನೆ ತಾಲ್ಲೂಕಿನ ಮರಿಯಮ್ಮನಹಳ್ಳಿಸಮೀಪದ ಗುಂಡಾ ಸ್ಟೇಷನ್ ಬಳಿಯ ಹನುಮನಬಂಡಿ ರಸ್ತೆಯಲ್ಲಿ ರಾತ್ರಿ ಜರುಗಿದೆ.

ಗುಂಡಾ ತಾಂಡದ ಎಲ್.ಜಿ.ಜಗದೀಶ್ವರ್ ನಾಯ್ಕ್, ಹಾಗೂ ಬ್ಯಾಲಕುಂದಿ ವಸಂತ ಕುಮಾರ್ ಎನ್ನುವವರು ಕರಡಿ ದಾಳಿಗೆ ಒಳಗಾದ ವ್ಯಕ್ತಿಗಳು.

ಇವರು ಬಿಎಂಎಂ ಕಾರ್ಖಾನೆಯಲ್ಲಿ ಕೆಲಸ ಮುಗಿಸಿ ರಾತ್ರಿ ಮನೆಗೆ ತೆರಳುವಾಗ ಮಾರ್ಗದ ಮಧ್ಯದಲ್ಲಿ ಎದುರಾದ ಎರಡು ಕರಡಿಗಳು ಮೇಲೆ ಎರಗಿ ದಾಳಿ ಮಾಡಿವೆ. ತೀವರ ಹರಸಾಹಸ ಪಟ್ಟು, ಕರಡಿ ಕೈಯಿಂದ ತಪ್ಪಿಸಿಕೊಂಡು ಬಂದಿದ್ದು,  ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಘಟನೆಯಿಂದ ಗುಂಡಾ ಗ್ರಾಮದಲ್ಲಿ ಭಯದ ವಾತವರಣ ನಿರ್ಮಾಣವಾಗಿದ್ದು,  ರಾತ್ರಿ ಹೊತ್ತು ರಸ್ತೆಯಲ್ಲಿ ತಿರುಗಾಡಲು ಗ್ರಾಮಸ್ಥರು, ಹಿಂಜರಿಯುವಂತಾಗಿದೆ.  ಅಲ್ಲದೆ ಬಹುತೇಕ ರೈತರ ಹೊಲಗಳು ಅರಣ್ಯ ಅಂಚಿನಲ್ಲಿದ್ದು, ಈಗೀಗ ಬಿತ್ತನೆ ಕಾರ್ಯ ಆರಂಭವಾಗಿದೆ. ಇದರಿಂದ ರೈತರು ಪ್ರತಿ ನಿತ್ಯ ಹೊಲಗಳಿಗೆ ತೆರಳಬೇಕಾಗಿದೆ. ಆದರೆ ಅರಣ್ಯ ಪ್ರದೇಶ ದೂರ ಇರುವಾಗಲೆ ರಸ್ತೆಗಳ ಮೇಲೆ ಕರಡಿಗಳು ಓಡಾಟ ಹೆಚ್ಚಾಗಿದ್ದು, ಇದರಿಂದ ರೈತರು ಹೊಲಗಳಿಗೆ ತೆರಳಲು ಭಯಭೀತರಾಗಿದ್ದಾರೆ.

LEAVE A REPLY

Please enter your comment!
Please enter your name here