ಕರವೇ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ .

0
125

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದ ಕೆ.ಎಸ್.ಆರ್ ಟಿ.ಸಿ ಡಿಪೋ ಮುಂಭಾಗದಲ್ಲಿ ಇರುವ ಕರ್ನಾಟಕ ರಕ್ಷಣಾ ವೇದಿಕೆ ಕಛೇರಿಯ ಮುಂಭಾಗದಲ್ಲಿ ಚಲನಚಿತ್ರ ನಟ ಅಂಬರೀಷ್ ಅವರ ಭಾವಚಿತ್ರಕ್ಕೆ ಮುಂದೆ ಎರಡು ನಿಮಿಷ ಮೌನಾಚರಣೆ ಮಾಡಿ ಹೂ ಅರ್ಪಣೆ ಮಾಡಿದರು ನಂತರ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷರಾದ ಎಂ. ಆರ್ ಲೋಕೇಶ್ ಅವರು ಕನ್ನಡ ಚಲನಚಿತ್ರರಂಗದ ದಿಗ್ವಿಜಯ ನಟರು 203 ಚಲನಚಿತ್ರಗಳಲ್ಲಿ ನಟನೆ ಮಾಡಿರುವ ಹಿರಿಯರು ಚಿತ್ರ ರಂಗದಲ್ಲಿ ಏನೇ ಸಮಸ್ಯೆಗಳು ಬಂದರು ಸಹ ಬಹಳ ಸೌಮತೆ ಇಂದ ಅದನ್ನು ನಿವಾರಣೆ ಮಾಡುತ್ತಿದ್ದರು. ಮತ್ತು ರಾಜಕಾರಣದಲ್ಲೂ ಸಹ ಲೋಕಸಭಾ ಸದಸ್ಯರಾಗಿದ್ದರು ಉತ್ತಮವಾಗಿ ಕೆಲಸ ನಿರ್ವಹಿಸಿದ್ದರು ರಾಜ್ಯದ ಪರವಾಗಿ ಒಳ್ಳೆಯ ಕೆಲಸ ಮಾಡಿದರೆ ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಅನ್ಯಾಯದ ಆಗುವ ಸಂದರ್ಭದಲ್ಲಿ ಅಂಬರೀಶ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಗಟ್ಟಿತನವನ್ನು ಪ್ರದೇಶ ಮಾಡಿ ಕರ್ನಾಟಕ ಪರವಾಗಿ ಕೆಲಸ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳಾದ ನಟರಾಜ್, ದೇವರಾಜ್, ತಾಲೂಕ ಅಧ್ಯಕ್ಷರಾದ ಎನ್ ನಾರಾಯಣಸ್ವಾಮಿ, ನಗರ ಅಧ್ಯಕ್ಷರು ಶಬ್ಬೀರ್ ಅಹ್ಮದ್, ಕೃಷ್ಣಾರೆಡ್ಡಿ ,ರಾಮಕೃಷ್ಣ ರೆಡ್ಡಿ, ಆನಂದ್, ಮಂಜುನಾಥ್,ಮುರಳಿ, ರಾಮು, ಈಶ್ವರ್, ಸುಬ್ರಮಣಿ ,ಇಂತಿಯಾಜ್,ಆಟೋ ಮಧು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here