ಕರುಗಳ ಮಾಂಸ ಸಾಗಿಸುತ್ತಿದ್ದ ಇಬ್ಬರ ಬಂಧನ

0
228

ಅಕ್ರಮವಾಗಿ ಕರುಗಳ ಮಾಂಸ ಸಾಗಿಸುತ್ತಿದ್ದ ಇಬ್ಬರ ಬಂಧನ.

ನೂರಾರು ಕರುಗಳ ಮಾಂಸ ಸಾಗಿಸುತ್ತಿದ್ದ ಟೆಂಪೊ,ಟಾಟಾಏಸ್ ಜಪ್ತಿ. 

ಬೆಂಗಳೂರು ಗ್ರಾಮಾಂತರ/ ದೊಡ್ಡಬಳ್ಳಾಫುರ : ಆಂಧ್ರ ಮೂಲದ ಟಾಟಏಸ್ ವಾಹನದಿಂದ ಟೆಂಪೂಗೆ ನೂರಾರು ಕರುಗಳ ಮಾಂಸವನ್ನ ಅಕ್ರಮವಾಗಿ ಶಿಪ್ಟ್ ಮಾಡುತ್ತಿದ್ದ ವಾಹನ ಸಮೇತ ಇಬ್ಬರನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಫುರ ತಾಲೂಕಿನ ಕಂಟನಕುಂಟೆ ಬಳಿ ಹಿಂದೂಪುರದ ಮೂಲದ ಟಾಟಾಏಸ್ ನಿಂದ ಕರುಗಳ ಮಾಂಸವನ್ನು ಟೆಂಪೂಗೆ ಶಿಪ್ಟ್ ಮಾಡುತ್ತಿದ್ದ ವೇಳೆ ಸ್ಥಳೀಯ ಯುವಕ ಜಯಕರ್ನಾಟಕ ಕಾರ್ಯಕರ್ತ ಕೆಟಿ.ಅಶೋಕ್ ಮಾಂಸದ ಸಮೇತ ಎರಡು ವಾಹನಗಳು ಹಾಗೂ ಇಬ್ಬರನ್ನ ಹಿಡಿದು ಸ್ಥಳಿಯ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಮಾಂಸವನ್ನು ಹಿಂದೂಪುರ ದಿಂದ ಬೆಂಗಳೂರಿನ ಶಿವಾಜಿನಗರಕ್ಕೆ ಸಾಗಿಸುತ್ತಿದ್ದಾಗಿ ಟಾಟಾಏಸ್ ಚಾಲಕ ಆನಂದ್ ಸ್ಥಳದಲ್ಲೇ ಹೇಳಿಕೆ ನೀಡಿದ್ದಾರೆ.

ಇನ್ನೂ ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ವಾಹನ ಸಮೇತ ಇಬ್ಬರನ್ನ ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.

 

ಬೈಟ್ : ಕೆಟಿ.ಅಶೋಕ್ ಜಯಕರ್ನಾಟಕ ಕಾರ್ಯಕರ್ತ

LEAVE A REPLY

Please enter your comment!
Please enter your name here