ಕರ್ತವ್ಯ ಲೋಪ…ಎಎಸ್ಐ ಹಾಗು ಮುಖ್ಯಪೇದೆ ಸಸ್ಪೆಂಡ್

0
143

ಬೆಂಗಳೂರು/ಮಹದೇವಪುರ:- ಜೂಜು ಅಡ್ಡೆ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ ಬಿಟ್ಟು ಕರ್ತವ್ಯ ಲೋಪವೆಸಗಿರುವ ಎಎಸ್ಐ ಹಾಗು ಮುಖ್ಯಪೇದೆಯನ್ನು ಅಮಾನತ್ತಿನಲ್ಲಿರಿಸಿ ವೈಟ್ಫೀಲ್ಡ್ ಉಪವಿಭಾಗದ ಡಿಸಿಪಿ ಅಬ್ದುಲ್ ಅಹದ್ ತನಿಖೆಗೆ ಆದೇಶಿಸಿದ್ದಾರೆ.

ಎಎಸ್ಐ ಅಮೃತೇಶ್, ಮುಖ್ಯಪೇದೆ ಜಯಕಿರಣ್ ಅಮಾನತ್ತುಗೊಂಡ ಸಿಬ್ಬಂದಿಗಳು, ನಿನ್ನೆ ಸಂಜೆ 6.30ಕ್ಕೆ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯ ಎ.ನಾರಾಯಣಪುರದಲ್ಲಿ ಇಸ್ಪೀಟ್ ಅಡ್ಡೆ ನಡೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದ ಮಹದೇಪುರ ಎಎಸ್ಐ ಅಮೃತೇಶ್ ನೇತೃತ್ವದಲ್ಲಿ ದಾಳಿ ಮಾಡಿದ್ದು 10 ಜನ ಜೂಜುಕೋರರನ್ನು ಬಂಧಿಸಿ ಅವರಿಂದ 42.500 ರೂ ಹಣ ಹಾಗು ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆದು ರಾತ್ರಿ 8 ಗಂಟೆಗೆ ಮೇಲಾಧಿಕಾರಿ ಪಿಎಸ್ಐ ಅಶ್ವಥ್ ಗಮನಕ್ಕೆ ತರದೆ ಬಿಟ್ಟು ಕಳಿಸಿದ್ದಾರೆ, ಈ ಬಗ್ಗೆ ಎಸ್ಐ ಅಶ್ವಥ್ ಪ್ರಶ್ನಿಸಿದಾಗ ಎಎಸ್ಐ ಅಮೃತೇಶ್ ಮತ್ತು ಮುಖ್ಯಪೇದೆ ಜಯಕಿರಣ್ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡು ವಾಗ್ವಾದ ನಡೆದು ಏಕವಚನದಲ್ಲಿ ನಿಂಧಿಸಿಕೊಂಡಿರುವ ಬಗ್ಗೆ ತಿಳಿದು ಬಂದಿರುವ ಹಿನ್ನೆಲೆ ಕಾನೂನು ಪಾಲಿಸದೆ ಕರ್ತವ್ಯ ಲೋಪ ಎಸಗಿರುವ ಎಎಸ್ಐ ಅಮೃತೇಶ್ ಹಾಗೂ ಮುಖ್ಯಪೇದೆ ಜಯಕಿರಣ್ರನ್ನು ಅಮಾನತ್ತುಗೊಳಿಸಿ ಮಾರತ್ತಹಳ್ಳಿ ಎಸಿಪಿ ಶಿವುಕುಮಾರ್ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ ಎಂದ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.

ಬೈಟ್: ಅಬ್ದುಲ್ ಅಹದ್, ಡಿಸಿಪಿ ವೈಟ್ಫೀಲ್ಡ್ ಉಪವಿಭಾಗ.

ಇನ್ನು ಈ ಹಿಂದೆ ವೈಟ್ಫೀಲ್ಡ್ ಉಪವಿಭಾಗದ ಕಾಡುಗುಡಿ ಪೊಲೀಸ್ ಠಾಣೆಯ ಮುಖ್ಯಪೇದೆ ದಯಾನಂದ್ ಕಟ್ಟಡ ಕಾಮಗಾರಿ ವೇಳೆ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ ಎಂದು ಬಿಲ್ಡರ್ ದಶರಥ್ ರೆಡ್ಡಿ ಬಳಿ 25ಲಕ್ಷಕ್ಕೆ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪ್ರಕರಣ ಸಂಬಂಧ ವೈಟ್ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಇನ್ನೂ ಆರೋಪಿತ ಮುಖ್ಯ ಪೇದೆಯನ್ನು ಬಂಧನಕ್ಕೂ ಮುನ್ನ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪೊಲೀಸರೆ ರಂಪಾಟ ಮಾಡಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮರುಕಳಿಸುತ್ತಿರುವ ಇಂತಹ ಪ್ರಕರಣ ಪೊಲೀಸ್ ಇಲಾಖೆಯನ್ನು ತಲೆತಗ್ಗಿಸುವಂತೆ ಮಾಡಿದೆ

LEAVE A REPLY

Please enter your comment!
Please enter your name here