ಕರ್ನಾಟಕ ಸೈಕಲ್ ಯಾತ್ರೆ.

0
177

ಹೊಸಪೇಟೆ: ಕರ್ನಾಟಕ ಕೆಎಸ್‍ಆರ್‍ಪಿ ಹದಿನಾಲ್ಕು ತುಕಡಿಗಳಿಂದ ಕರ್ನಾಟಕ ಸೈಕಲ್ ಯಾತ್ರೆ ಇಂದು ವಿಶ್ವವಿಖ್ಯಾತ ಹಂಪಿಗೆಆಗಮಿಸಿತು

ಕರ್ನಾಟಕ ಸೈಕಲ್ ಯಾತ್ರೆಯು ಇದೇ ತಿಂಗಳು 12 ರಿಂದ ಬೀದರ್‍ನಿಂದ ಆರಂಭವಾಗಿರುವ  ಯಾತ್ರೆಯು ಗುಲ್ಬರ್ಗ,ಬಿಜಾಪುರ, ಬೆಳಗಾವಿ, ಹುಬ್ಬಳ್ಳಿ, ಗದಗ, ಕೊಪ್ಪಳ ದಿಂದ ಇಂದುಮಧ್ಯಾಹ್ನ ವಿಶ್ವವಿಖ್ಯಾತ ಹಂಪಿಗೆ ಆಗಮಿಸಿ ವಿರುಪಾಕ್ಷೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿದರು ನಂತರ ದೇವಸ್ಥಾನದ ಸುತ್ತಮುತ್ತಲಸ್ಮಾರಕಗಳನ್ನು ವೀಕ್ಷಿಸಿ ಸೈಕಲ್ ಯಾತ್ರೆಯಲ್ಲೇ ಕಡಲೆಕಾಳುಗಣೇಶ,ಸಾಸುವೆಕಾಳು ಗಣೇಶ, ಕೃಷ್ಣದೇವಸ್ಥಾನ, ಅಕ್ಕತಂಗಿಯರ ಗುಡ್ಡ,ನೆಲಸ್ಥರ ಶಿವಾಲಯ, ನೀರಿನ ಅರವಟ್ಟಿಗೆ, ರಾಣಿಸ್ನಾನ ಗೃಹ,ಗಾಣಗಿತ್ತಿ ದೇವಸ್ಥಾನದ ಮಾರ್ಗವಾಗಿ ವಿಜಯ ವಿಠ್ಠಲದೇವಸ್ಥಾನಕ್ಕೆ ತೆರಳಿದರು ಇಲ್ಲಿಂದ ಶಿಗ್ಗಾವ್, ಶಿವಮೊಗ್ಗ,ಮಂಗಳೂರು, ಹಾಸನ, ಮೈಸೂರು ಮೂಲಕ ಬೆಂಗಳೂರಿನವಿಧಾನಸೌದದಲ್ಲಿ ಕರ್ನಾಟಕ ಸೈಕಲ್ ಯಾತ್ರೆಸಮಾರೋಪಗೊಳ್ಳಲಿದೆ, ಕರ್ನಾಟಕ ಸೈಕಲ್ ಯಾತ್ರೆಯಲ್ಲಿ ಖುದ್ದುಎಸ್‍ಪಿಯವರೇ ಸೈಕಲ್ ತುಳಿಯುತ್ತಾ ಯುವಕರನ್ನುಹುರಿದುಂಭಿಸುತ್ತಿದ್ದಾರೆ

ನಮ್ಮೂರು ಟಿ ವಿ ವಾಹಿನಿ ಯೊಂದಿಗೆ  ಮಾತನಾಡಿದ ಎಸ್.ಪಿ ಅಯ್ಯಪ್ಪರವರು  ಕರ್ನಾಟಕ ಸೈಕಲ್ ಯಾತ್ರೆಯು 1750ಕಿಮೀ ದಾಗಿದ್ದು ದಾರಿಯುದ್ದಕ್ಕೂ ಮಕ್ಕಳಿಗೆ ಆರೋಗ್ಯದ ಕುರಿತುಜಾಗೃತಿ, ಸ್ವಚ್ಚಭಾರತ, ಪರಿಸರದ ಕುರಿತುಹಾಗು ಸಸಿನೆಡುವಕಾರ್ಯಕ್ರಮವನ್ನು ಮಾಡುತ್ತಾ ಕರ್ನಾಟಕ ಸೈಕಲ್ ಯಾತ್ರೆಮಾಡುತ್ತಿದ್ದೇವೆ ಎಂದರು   ಕರ್ನಾಟಕ ಸೈಕಲ್ ಯಾತ್ರೆಯ ಹಂಪಿಗೆಆಗಮಿಸಿದ ಸಮಯದಲ್ಲಿ ಹಂಪಿಗ್ರಾಮ ಪಂಚಾಯತಿ ಸದಸ್ಯರುಹೂಮಾಲೆ ಹಾಕಿ ಸ್ವಾಗತಿಸಿದರು ಹಂಪಿಪೊಲೀಸ್ ಠಾಣೆಯ ಸಿಪಿಐಕೆ.ಪಿ ರವಿ ಹಾಗು ಹಂಪಿ ಸಂಚಾರಿ ಠಾಣೆಯ ಪೊಲೀಸರು ಸೂಕ್ತಬಂದೋಬಸ್ತ್ ಕೈಗೊಂಡಿದ್ದರು​

LEAVE A REPLY

Please enter your comment!
Please enter your name here