ಕಲ್ಲಂಗಡಿ ಹಣ್ಣುಗಳಿಗೆ ಡಿಮ್ಯಾಂಡೋ ಡಿಮ್ಯಾಂಡು

0
202

ಹಾವೇರಿ/ ಬ್ಯಾಡಗಿ: ೧೫೦-ರಿಂದ ೩೦೦ ರೂಪಾಯಿ ವರೆಗೆ ಬೆಲೆ ವ್ಯಾಪಾರಿಗಳ ಮುಖದಲ್ಲಿ ನಗೆ,ಗ್ರಾಹಕರ ಜೇಬಿಗೆ ಕತ್ತರಿ  ದುಬಾರಿ ಬೆಲೆಗೆ ಬೇಸತ್ತ ಗ್ರಾಹಕ.     ಇಂದು ರಾಜ್ಯಾದ್ಯಂತ ಆಚರಿಸುತ್ತಿರುವ ಮಹಾ ಶಿವರಾತ್ರಿ,ಪರಮಶಿವನ ಭಕ್ತರ ಪಾಲಿನ ಪುಣ್ಯ ದಿನ.ಎಲ್ಲ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ  ಭಕ್ತರೆಲ್ಲ ದೇವರ ಆಶೀವಾ೯ದ  ಪಡೆಯಲು ದೇವಾಲಯಗಳಿಗೆ ಭೇಟಿ ಕೊಡೋದು, ಉಪವಾಸ ಆಚರಿಸುವುದು ವಾಡಿಕೆ.ಇದರ ಜೊತೆಗೆ ಬಿಸಿಲಿನ ತಾಪದಿಂದ ಚೇತರಿಸಿಕೊಳ್ಳಲು ದಾಹಬಾಧೆ ತೀರಿಸುವ  ಕಲ್ಲಂಗಡಿ ಹಣ್ಣಿನ ಮೊರೆ ಹೋದ್ರೆ,ನಿಮ್ಮ ದೇಹದ ತಾಪಮಾನ ದಿಢೀರನೆ ದ್ವಿಗುಣಗೊಳ್ಳುವ ಸಾಧ್ಯತೆ ಇದೆ.ಯಾಕಪ್ಪಾ  ಅಂತಿರಾ, ಅದಕ್ಕೆ ಕಾರಣ ಕಲ್ಲಂಗಡಿಯ ದುಬಾರಿ ಬೆಲೆ.ಹೌದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರು ಗ್ರಾಮದಲ್ಲಿ ಒಂದು ಕಲ್ಲಂಗಡಿ  ಹಣ್ಣಿಗೆ ೧೫೦ರೂಪಾಯಿ ಯಿಂದ ೩೦೦ರೂಪಾಯಿ ತನಕ ಬೆಲೆ ನಿಗದಿ ಮಾಡಲಾಗಿದೆ. ಯಪ್ಪಾ.! ಈ ಬೆಲೆ ಕೇಳಿದ ಗ್ರಾಹಕರಿಗೆ ಆಶ್ಚಯ೯ವಾಗಿದೆ, ಕೆಲವು ಗ್ರಾಹಕರು ಗೋಜಾಡಿ ಬೆಲೆ ಕಡಿಮೆಗೊಳಿಸಿಕೊಂಡು ಹಣ್ಣು ಖರೀದಿ ಮಾಡಿದ್ರೆ, ಮತ್ತೆ ಕೆಲವ್ರು  ಕೈಗೆಟುಕದ ಬೆಲೆಯಿಂದ ಬೇಸತ್ತು ಇದರ ಸಹವಾಸವೇ ಬೇಡ ಅಂತಾ ಮನೆಗೆ ವಾಪಾಸ್ ಆಗುತ್ತಿದ್ದಾರೆ. ಒಟ್ಟಾರೆ ಇಂದಿನ ಶಿವರಾತ್ರಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ್ರೆ ವ್ಯಾಪಾರಿಗಳಿಗೆ ಮಾತ್ರ ಅದ್ರುಷ್ಟವಾಗಿದೆ.

LEAVE A REPLY

Please enter your comment!
Please enter your name here