ಕಳಪೆ ಕಾಮಗಾರಿ ..ಕಾಣುತ್ತಿಲ್ಲವೇ…ಅಧಿಕಾರಿಗಳಿಗೆ?

0
167

ಚಿಕ್ಕಬಳ್ಳಾಪುರ/ ಬಾಗೇಪಲ್ಲಿ :ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎಂಬ ಗಾದೆ ಮಾತು ಸತ್ಯವಾಗಿದೆ .
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಅಭಿವೃದ್ಧಿಗೆ ಅನೇಕ ಜನಪರವಾದ ಕಾರ್ಯಕ್ರಮ ಜಾರಿ ಮಾಡುತ್ತಿದೆ .ಅಧಿಕಾರಿಗಳ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಈ ಅನುದಾನವೆಲ್ಲಾ ಅವರ ನೋವು ತುಂಬುತ್ತಿರುವುದು ವಿಪರ್ಯಾಸವಾಗಿದೆ ಅದಕ್ಕೆ ಒಂದು ಉದಾಹರಣೆ ಬಾಗೇಪಲ್ಲಿ ತಾಲೂಕು ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಡ್ಲ ವಾರಪಲ್ಲಿ ಪರಿಶಿಷ್ಟ ಜಾತಿ ಕಾಲೊನಿಯಲ್ಲಿ ಸುಮಾರು ಒಂಬತ್ತು ಲಕ್ಷ ರೂಪಾಯಿ ವೆಚ್ಚದ ಸಿಸಿ ರಸ್ತೆಯನ್ನು ಅತ್ಯಂತ ಕಳಪೆ ಮಟ್ಟದಲ್ಲಿ ಕಾಮಗಾರಿನ್ನು ಮಾಡುತ್ತಿದ್ದಾರೆ . ಈ ಸಿಸಿ ರಸ್ತೆಯೂ ಸುಮಾರು ವರ್ಷಗಳ ನಂತರ ಈ ಕಾಲೊನಿಗೆ ಸರ್ಕಾರ ಅನುದಾನ ಮಂಜೂರು ಮಾಡಿದೆ ಆದರೆ ಅಧಿಕಾರಿಗಳ ಮತ್ತು ಗುತ್ತಿಗೆದಾರರು ಸರಿಯಾದ ರೀತಿ ಸಿಸಿ ರಸ್ತೆಯನ್ನು ಮಾಡದೇ ತಮ್ಮ ಜೇಬುಗಳನ್ನು ತುಂಬಿಸಿಕೊಳ್ಳ ಕ್ಕೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರ ಆರೋಪವಾಗಿದೆ .
ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಪರಿಶಿಷ್ಟ ಜಾತಿ ಕಾಲೊನಿಗೆ ಭೇಟಿ ನೀಡಿ ಸರಿಯಾದ ರೀತಿ ಸಿಸಿ ರಸ್ತೆ, ಸಿಸಿ ರಸ್ತೆ ಇಲ್ಲವೆ ಅವರಿಗೆ ಸರ್ಕಾರದ ಅನುದಾನವನ್ನು ಪಾವತಿ ಮಾಡದಂತೆ ಇಲ್ಲವೇ ಸರಿಯಾದರೆ ರೀತಿಯಲ್ಲಿ ಸಿಸಿ ರಸ್ತೆ ಮಾಡಲು ಆದೇಶಿಸಬೇಕೆಂದು. ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ . ಈ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯಾವ ರೀತಿ ಕಾರ್ಯ ಪ್ರವೃತ್ತರಾಗುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ

LEAVE A REPLY

Please enter your comment!
Please enter your name here