ಕಳ್ಳನ ಬಂಧನ,ಹಲವು ಪ್ರಕರಣ ಬೆಳಕಿಗೆ

0
230

ಬೀದರ್/ಬಸವಕಲ್ಯಾಣ: ನಗರದಲ್ಲಿ ನಾಲ್ಕು ಮನೆಗಳಲ್ಲಿ ಚಿನ್ನಾಭರಣ ಕಳವು ಮಾಡಿದ ಆರೋಪಿಯನ್ನು ಬಂಧಿಸಿ ಈತನಿಂದ ಚಿನ್ನ, ಚಿನ್ನಾಭರಣ, ಬೆಳ್ಳಿ ದೀಪ ವಶಪಡಿಸಿಕೊಳ್ಳುವಲ್ಲಿ ಬಸವಕಲ್ಯಾಣ ನಗರ ಠಾಣೆ ಪೊಲೀಸರ್ ತಂಡ ಯಶಸ್ವಿಯಾಗಿದೆ. ಗುಲಬರ್ಗಾ ಜಿಲ್ಲೆಯ ಸುಲ್ತಾನಪೂರನ ಗ್ರಾಮದ ಲಾಲ್ಯಾ(ಲಾಲು) ಗಣಪತಿ ಬಂಧಿತ ಆರೋಪಿ.

ಈ ಹಿಂದೆ 2015-16ರಲ್ಲಿ ನಗರದ ನಾಲ್ಕು ಮನೆಗಳಲ್ಲಿ ಚಿನ್ನಾಭರಣವನ್ನು ಕಳವು ಮಾಡಲಾಗಿತ್ತು. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಬಂಧಿಸಲಾಗಿದೆ.
ಸಸ್ತಾಪೂರ ಬಂಗ್ಲಾ ಬಳಿ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಸಂಶಯದ ಆಧಾರದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಮಾಡಿರುವದಾಗಿ ಈತ ಒಪ್ಪಿಕೊಂಡಿದ್ದು, ಕಳವು ಮಾಡಿದ ಚಿನ್ನಾಭರಣಗಳನ್ನು, ಈತನಿಂದ 10 ಗ್ರಾಮ ಗಟ್ಟಿ ಬಂಗಾರ, ಚಿನ್ನಾಭರಣ, ಬೆಳ್ಳಿ ದೀಪಗಳು, ಎರಡು ಮೊಬೈಲ್ಗಳನ್ನು ಸೇರಿ 6.21 ಲಕ್ಷ ರೂ. ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ, ಹೆಚ್ಚುವರಿ ಎಸ್ಪಿ ಶ್ರೀಹರಿಬಾಬು, ಹುಮನಾಬಾದ ಡಿವೈಎಸ್ಪಿ ಚಂದ್ರಕಾಂತ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಅಲಿಸಾಬ, ಪಿಎಸ್ಐ ಗುರು ಪಾಟೀಲ್ ನೇತೃತ್ವದ ತಂಡ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಎಸ್ಐ ಕಾಶಿನಾಥ, ಸಿಬ್ಬಂದಿಗಳಾದ ಬಸವರಾಜ, ಸಚೀನ ಸುತ್ರಾವೆ, ಶರಫೋದ್ದಿನ್, ರಾಜಕುಮಾರ, ಮಲ್ಲಿಕಾಜರ್ುನ ಸಂತೋಜಿ, ಸಣ್ಮುಖಯ್ಯ, ನಿರೂಪದಿ, ವಸಂತ ಪೊಲೀಸ್ ತಂಡದಲ್ಲಿದ್ದರು.
ಬಹುಮಾನ: ನಗರದಲ್ಲಿ ನಡೆದ ಕಳವು ಪ್ರಕರಣಗಳಿಗೆ ಸಂಬಂಧಿಸಿದ ಆರೋಪಿಯನ್ನು ಬಂಧಿಸಿ, ಆತನಿಂದ ಚಿನ್ನಾಭರಣ ಜಪ್ತಿ ಮಾಡಿಕೊಂಡಿರುವ ಪೊಲೀಸ್ ತಂಡದ ಕಾರ್ಯಕ್ಕೆ ಹುಮನಾಬಾದ ಡಿವೈಎಸ್ಪಿ ಚಂದ್ರಕಾಂತ ಪೂಜಾರಿ ಮೆಚ್ಚುಗೆ ವ್ಯಕ್ತಪಡಿಸಿ, ತಂಡಕ್ಕೆ 5 ಸಾವಿರ ರೂ ನಗದು ಬಹುಮಾನ ನೀಡಿದ್ದಾರೆ.

LEAVE A REPLY

Please enter your comment!
Please enter your name here