ಕಳ್ಳರನ್ನು ಹಿಡಿದ ಕಮ್ಯುನಿಟಿ ಪೊಲೀಸಿಂಗ್

0
430

ಬೆಂಗಳೂರು/ಕೆ.ಆರ್.ಪುರ:– ಆ ಏರಿಯಾದ ಜನ ಕಳ್ಳರ ಹಾವಳಿಯಿಂದ ರೋಸಿ ಹೋಗಿದ್ದರು.. ವೀಕ್ ಎಂಡ್ ಬಂತೆಂದರೆ ಸಾಕು ಆಏರಿಯಾದಲ್ಲಿ ಕಳ್ಳತನ ಕಟ್ಟಿಟ್ಟ ಬುಟ್ಟಿ.. ಕಳ್ಳರನ್ನ ಹಿಡಿಯಲೆ ಬೆಕಂತ ಜನರೇ ಏರಿಯಾದಲ್ಲಿ ಸಿಸಿಟಿವಿ ಅಳವಡಿಸಿದ್ರು.. ಆಮೇಲೆ ಏನಾಯಿತು ಅಂತೀರಾ ಈ ಸ್ಟೋರಿ ನೋಡಿ…..

ಅದು ಬೆಳಗಿನ ಜಾವ 3 ರ ಸಮಯ ಆ ರಸ್ತೆಯಲ್ಲಿಯ ನಾಯಿ ಒಂದೇ ಸಮನೇ ಬೊಗಳತೊಡಿಗಿತ್ತು.. ಏರಿಯಾದಲ್ಲಿ ಏನೋ ಆಗ್ತಿದೆ ಅಂತ ಜನ ಹೊರ ಬಂದ್ರು.. ಬಂದಷ್ಟೇ ವೇಗದಲ್ಲಿಯೇ ತಾವೇ ಅಳವಡಿಸಿದ್ದ ಸಿಸಿಟಿವಿಯನ್ನ ಪರಿಶೀಲಿಸಿದ್ರು ಅಷ್ಟೆ ಕಳ್ಳನ ಕಳ್ಳಾಟ ಬಯಲಾಯ್ತು.

ಅಂದಹಾಗೆ ಈ ದೃಶ್ಯ ಕಂಡು ಬಂದಿದ್ದು ಕೆ.ಆರ್.ಪುರ ಸಮೀಪದ ವಾರಣಾಸಿಯಲ್ಲಿ.. ಇಂದು (ರವಿವಾರ)ಬೆಳಕಿನ ಜಾವ ಕಳ್ಳತನಕ್ಕೆ ಅಂತ ಹೋಗಿದ್ದ ನೈಜೀರಿಯಾ ಮೂಲದ ಪ್ರಜೆ ಸಿನಿಯಾನ್ ಹಾಗೂ ರಾಜೇಶ್ ಎಂಬ ಇಬ್ಬರು ಕಳ್ಳತನಕ್ಕೆ ಪ್ರಯತ್ನಿಸುತ್ತಿದ್ದರಂತೆ ಈ ಇಬ್ಬರನ್ನ ಜನರೇ ಸಿಸಿಟಿವಿ ದೃಷ್ಯದ ಆದಾರದಲ್ಲಿ ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ

ಬೈಟ್: ನಂದನ್ – ಸ್ಥಳಿಯ.

ಜನ ಕಳ್ಳರನ್ನ ಬಂಧಿಸಲು ಕಾರಣವಾಗಿದ್ದೆ ಕಮ್ಯುನಿಟಿ ಪೊಲೀಸಿಂಗ್ ವ್ಯವಸ್ಥೆ ಮತ್ತು ಡಯಲ್100 ನ ತಕ್ಷಣದ ಕಾರ್ಯಾಚರಣೆ. ಜೊತೆಗೆ ಜನರು ಪೊಲೀಸರ ಜೊತೆ ಕೈ ಜೋಡಿಸಿದ್ರೆ ಕಳ್ಳರ ಹಾವಳಿಯನ್ನ ತಡೆಯ ಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಎಂದು ವೈಟ್ಫೀಲ್ಡ್ ಡಿಸಿಪಿ ಎಂ. ನಾರಾಯಣ್ ತಿಳಿಸಿದರು.

ಸದ್ಯ ಕೆ.ಆರ್.ಪುರ ಪೊಲೀಸರು ಕಳ್ಳರನ್ನ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ ಆದ್ರೆ ಜನ ತಮ್ಮ ಮನೆಗೆ ಮಾತ್ರ ಸಿಸಿಟಿವಿ ಅಳವಡಿಸಿಕೊಳ್ಳೋದನ್ನ ಬಿಟ್ಟು ಸಾರ್ವಜನಿಕ ರಸ್ತೆಗೆ ಅಳವಡಿಸುವ ಮೂಲಕ ಮಾದರಿ ನಾಗರಿಕತೆಗೆ ನಾಂದಿಯಾಗಿದ್ದು ಇದೇ ಸಿಸಿಟಿವಿ ಅಳವಡಿಸುವ ಆಲೋಚನೆ ಬಡಾವಣೆಗಳ ನಿವಾಸಿಗಳಲ್ಲಿ ಬಂದರೆ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಬಹುದಾಗಿದೆ.

LEAVE A REPLY

Please enter your comment!
Please enter your name here