ಕಳ್ಳರಿದ್ದಾರೆ ಎಚ್ಚರಿಕೆ

0
253

ಬಳ್ಳಾರಿ/ಹೊಸಪೇಟೆ :ವಿಶ್ವಪ್ರಸಿದ್ಧ ಹಂಪಿ ಪ್ರವಾಸಕ್ಕೆ ತೆರಳುತ್ತಿದ್ದೀರಾ? ಒಂದು ವೇಳೆ ಕಾರಿನಲ್ಲಿ ಪಯಣ ಬೆಳೆಸಿದ್ದರೆ ಹುಷಾರ್‌! ಹಂಪಿಯಲ್ಲಿ ಕಾರು ಗಾಜು ಒಡೆದು ಕಳವು ಮಾಡುವ ಪ್ರಕರಣ ಹೆಚ್ಚಾಗುತ್ತಿದೆ. ಇಂದು ಸಂಜೆ ಏಳು ಗಂಟೆಗೆ ಹಂಪಿಯ ಪಾರ್ಕಿಂಗ್ ಸ್ಥಳದಲ್ಲಿ ಆಲ್ಟೋ ಕಾರಿನ ಹಿಂಭಾಗದ ಗಾಜು ಒಡೆದು ಮೊಬೈಲ್ ಮತ್ತು ಬ್ಯಾಗ್ ಕಳವು ಮಾಡಿ ಪರಾರಿಯಾಗಿದ್ದಾರೆ. ಗಂಗಾವತಿಯಿಂದ ಹಂಪಿ ವೀಕ್ಷಣೆಗೆ ಕಾರಿನಲ್ಲಿ ಆಗಮಿಸಿದ್ದ ಪ್ರವಾಸಿಗರು ಶ್ರೀ ವಿರುಪಾಕ್ಷೇಶ್ವರ ದೇವಸ್ಥಾನಕ್ಕೆ ತೆರಳಿದ್ದರು. ದರುಶನ ಮಾಡಿ  ವಾಪಾಸ್ ಬರುವಷ್ಟರಲ್ಲಿಯೇ ಕಾರಿನ ಗಾಜು ಒಡದು ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದಾರೆ. ಈ ಹಿಂದೆಯೇ ತಿಂಗಳಲ್ಲಿ  ಹಂಪಿಯಲ್ಲಿ ಎರಡು ಕಾರು ಗಾಜು ಒಡೆದು ಕಳವು ಮಾಡಿದ ಪ್ರಕರಣಗಳು ಜರುಗಿದೆ. ಕಾರಿನ ಗಾಜು ಒಡೆದು ದರೋಡೆ ಮಾಡುವ ಪ್ರತ್ಯೇಕ ತಂಡ ಈ ರೀತಿ ಕೃತ್ಯವೆಸಗುತ್ತಿರುವುದರ ಬಗ್ಗೆ ಅನುಮಾನಗಳಿವೆ. ಇಂದಿನ ಕಳವಿನ ಬಗ್ಗೆ ಹಂಪಿ ಸಿಪಿಐ ರವಿ  ಅಂಥ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.ಪೊಲೀಸ್ ರಿಗೆ ಇದು ತಲೆನೋವು ಆಗಿ ಪರಿನಮಿಸಿದೆ

LEAVE A REPLY

Please enter your comment!
Please enter your name here