ಕಾಂಕ್ರಿಟ್ ಚತುಷ್ಪಥ ಹೆದ್ದಾರಿ…ಕಾಮಗಾರಿ ಆರಂಭ

0
231

ಬಳ್ಳಾರಿ/ಹೊಸಪೇಟೆ: ಯಿಂದ ಬಳ್ಳಾರಿ ನಗರದ ಮೂಲಕ ಆಂಧ್ರಪ್ರದೇಶಕ್ಕೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 63ನ್ನು ಚತುಷ್ಪಥ ಕಾಂಕ್ರಿಟ್ ರಸ್ತೆಯನ್ನಾಗಿಸುವ ಕಾಮಗಾರಿ ಆರಂಭವಾಗಿದೆ. ಹೊಸಪೇಟೆಯಿಂದ ಬಳ್ಳಾರಿ ಕೇವಲ 60 ಕಿಲೋ ಮೀಟರ್ ದೂರವಿದೆ. ಇದು ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಪ್ರಸ್ತುತ ಕೇವಲ ದ್ವಿಪಥ ರಸ್ತೆಯಾಗಿತ್ತು. ಹೀಗಾಗಿ ಈ ರಸ್ತೆಯಲ್ಲಿ ಜಿಲ್ಲೆಯಲ್ಲಿನ ಅದಿರು ಸಾಗಣೆ ಮತ್ತು ಜಿಂದಾಲ್ ಮೊದಲಾದ ಉಕ್ಕು ಕಾರ್ಖಾನೆಗಳಿಂದ ವಾಹನಗಳ ಸಂಚಾರದ ದಟ್ಟಣೆ ಹೆಚ್ಚಿದೆ. ಇದರಿಂದಾಗಿ ಬಳ್ಳಾರಿ ಮತ್ತು ಹೊಸಪೇಟೆ ಮಧ್ಯದ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ 65 ಕಿಲೋ ಮೀಟರ್ ರಸ್ತೆಯಲ್ಲಿ ಸಂಚರಿಸಲು ಬಸ್ ಸೇರಿದಂತೆ ಇನ್ನಿತರ ವಾಹನಗಳಲ್ಲಿ ಎರಡು ತಾಸು ಸಮಯ ಬೇಕಿತ್ತು. ಅದಕ್ಕಾಗಿ ಈ ರಸ್ತೆಯ ಷಟ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತಾದರೂ  ಹಲವು ವರ್ಷಗಳಿಂದ ಈ ಬೇಡಿಕೆ ಈಡೇರಿರಲಿಲ್ಲ. ಆದರೆ ಇದೀಗ ಕೇಂದ್ರ ಸರಕಾರ ಈ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಮುಂದಾಗಿದೆ. ಹೊಸಪೇಟೆ ಬೈಪಾಸ್ ರಸ್ತೆಯಿಂದ ಆರಂಭಗೊಂಡು ಬಳ್ಳಾರಿ ಮೂಲಕ ಆಂಧ್ರಪ್ರದೇಶದ ಗಡಿವರೆಗೆ 95 ಕಿಲೋ ಮೀಟರ್ ರಸ್ತೆ ಅಗಲೀಕರಣಕ್ಕೆ ಅವಶ್ಯವಾದ ಭೂಸ್ವಾಧೀನ ಮತ್ತು ಕಟ್ಟಡಗಳ ತೆರವು ಕಾರ್ಯಕ್ಕೆ ಅನುಮತಿ ಸಿಕ್ಕಿದೆ. ಈ ರಸ್ತೆ ಸಂಪೂರ್ಣ ಕಾಂಕ್ರಿಟ್ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಿ. ಒಟ್ಟು 1625 ಕೋಟಿ ರೂಪಾಯಿಗಳ ವೆಚ್ಚದ ಯೋಜನೆ ಇದಾಗಿದೆ. ರಸ್ತೆ ನಿರ್ಮಾಣದ ಯೋಜನೆಯನ್ನು 867 ಕೋಟಿ ರೂಪಾಯಿಗೆ ಗ್ಯಾಮನ್ ಇಂಡಿಯಾ ಕಂಪನಿಗೆ ಗುತ್ತಿಗೆ ನೀಡಿದೆ.
ಹೊಸಪೇಟೆ, ತೋರಣಗಲ್ಲು, ಕುಡುತಿನಿ, ಧರ್ಮಸಾಗರ, ಜೋಳದರಾಶಿ ವಡ್ಡರಹಟ್ಟಿ ಮತ್ತು ಬಳ್ಳಾರಿ ಸೇರಿ ಏಳು ಕಡೆ 57 ಕಿಲೋ ಮೀಟರ್ ಉದ್ದದಲ್ಲಿ ಬೈಪಾಸ್ ರಸ್ತೆ ನಿರ್ಮಿಸಲಿದ್ದು, ಪಾಪಿನಾಯಕನ ಹಳ್ಳಿಯಲ್ಲಿ ಫ್ಲೈಓವರ್ ಬರಲಿದೆ. ಎರಡು ಬೃಹತ್ ಸೇತುವೆ ಮತ್ತು 41 ಕಿರು ಸೇತುವೆ, 9 ಗ್ರೇಡ್ ಸಪರೇಟರ್ಸ್, 3 ರೈಲ್ವೆ ಓವರ್ ಬ್ರಿಡ್ಜ್‌ಗಳು,  24 ಕಿ.ಮೀ. ಸರ್ವಿಸ್ ರಸ್ತೆ, 153 ಕಲ್ವರ್ಟ್‍ಗಳು, 37 ಚಿಕ್ಕ ಮತ್ತು 8 ದೊಡ್ಡ ಬಸ್ ಸೆಲ್ಟರ್ಸ್ ಈ ಕಾಮಗಾರಿಯಲ್ಲಿ ಸೇರಿವೆ.
ಕಾಮಗಾರಿ ಕಳೆದ ತಿಂಗಳಿಂದ ಆರಂಭಗೊಂಡಿದೆ. ಬರುವ ಎರಡು ವರ್ಷದಲ್ಲಿ ಇದು ಪೂರ್ಣಗೊಳ್ಳಲಿದೆ ಎಂದು ಎಂದು ಗ್ಯಾಮನ್ ಇಂಡಿಯಾ ಕಂಪನಿಯ ಯೋಜನಾ ಅಧಿಕಾರಿ ಸಂಜೀವ್ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here