ಕಾಂಗ್ರೆಸ್‍ ತೊರೆದು ಜೆ ಡಿ ಎಸ್ ಗೆ ಸೇರ್ಪಡೆ…

0
296

ತುಮಕೂರು/ಪಾವಗಡ:ಮಾಜಿ ಪುರಸಭೆ ಅಧ್ಯಕ್ಷರು ಹಾಗೂ ಕಾಂಗ್ರೆಸ್‍ ನ ಮಾನಂ ವೆಂಕಟಸ್ವಾಮಿ ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ಸೇರ್ಪಡೆಗೊಂಡರು.

ಮಾನಂ ವೆಂಕಟಸ್ವಾಮಿ ಮಾತನಾಡುತ್ತಾ ಸರಳ ಸಜ್ಜನಿಕೆಯ ವ್ಯಕ್ತಿ ಕ್ಷೇತ್ರದ ಶಾಸಕ ಕೆ.ಎಂ.ತಿಮ್ಮರಾಯಪ್ಪನವರು ಜನಪರ ಅಭಿವೃದ್ದಿ ಕಾರ್ಯಗಳನ್ನು ಮಾಡಿರುವುದು ಶ್ಲಾಘನೀಯ ಎಂದರು.ತಿಮ್ಮರಾಯಪ್ಪ ಮಾತನಾಡುತ್ತಾ ಕ್ಷೇತ್ರದ ಕಾರ್ಯಕರ್ತರ ಸಹಕಾರದಿಂದ ಇಂದು ಮಾನಂ ವೆಂಕಟಸ್ವಾಮಿ ಮತ್ತು ಅವರ ಸಾವಿರಾರು ಬೆಂಬಲಿಗರು ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಮಾಡಿರುವ ಜನಪರ ಅಭಿವೃದ್ದಿ ಕೆಲಸಗಳನ್ನು ಗಮನದಲ್ಲಿಟ್ಟುಕೊಂಡು ಜೆಡಿಎಸ್ ಪಕ್ಷ ಸೇರಿರುವುದು ಪಕ್ಷಕ್ಕೆ ಆನೆ ಬಲ ಬಂದಂತಾಗಿದ್ದು ಬರುವ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು ಜನರ ಸೇವೆ ಮಾಡುತ್ತೇವೆ ಅದಕ್ಕಾಗಿ ಜನರು ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಮಾನಂ ವೆಂಕಟಸ್ವಾಮಿ ಬೆಂಬಲಿಗರಾದ ಎ.ಪಿ.ಎಂ.ಸಿ.ಸದಸ್ಯ ಚನ್ನಕೇಶವರೆಡ್ಡಿ, ತಾ.ಪಂ.ಸದಸ್ಯ ನರಸಿಂಹ, ಪುರಸಭೆಯ ಮಾಜಿ ಅಧ್ಯಕ್ಷರಾದ ಲಕ್ಷ್ಮಿದೇವಿ ಗುಟ್ಟಳ್ಳಿಅಂಜಪ್ಪ, ನಾಗಲಮಡಿಕೆ ಗ್ರಾ.ಪಂ. ಅಧ್ಯಕ್ಷ ಪೆÇೀಮ್ಯನಾಯ್ಕ, ವೀರಮ್ಮನಹಳ್ಳಿ ಗ್ರಾ.ಪಂ.ಸದಸ್ಯ ಲೋಕೇಶ್, ಗಂಗಾಧರ್, ಮುಖಂಡರಾದ ಎಗುಪಲ್ಲಿ ವೇಣು, ಅಂಜನ್ ತಿಮ್ಮರಾಜು, ಅಮೀರ್, ಕನ್ನಮೇಡಿ ಲೋಕೇಶ್, ಚಂದ್ರಾನಾಯ್ಕ, ಸಂದೀಪ್, ಸುರೇಂದ್ರ, ಬಾಲಕೃಷ್ಣ, ಪೆನ್ನೋಬಳೇಶಪ್ಪ, ರಮೇಶ್, ಪ್ರಸನ್ನಕುಮಾರ್ ಮತ್ತು ಸಾವಿರಾರು ಬೆಂಬಲಿಗರು ಹಾಜರಿದ್ದು ಮಾನಂವೆಂಕಟಸ್ವಾಮಿಯವರಿಗೆ ಶುಭಕೋರಿದರು.

LEAVE A REPLY

Please enter your comment!
Please enter your name here