ಕಾಂಗ್ರೆಸ್ ಪಕ್ಷದ ಚುನಾಯಿತ ಪ್ರತಿನಿಧಿಗಳ ಹಾಗೂ ಕಾರ್ಯಕರ್ತರ ಸಭೆ..

0
170

ಮಂಡ್ಯ/ಮಳವಳ್ಳಿ: ಕೇಂದ್ರ ಸರ್ಕಾರ ಸಾಧನೆ ಶೂನ್ಯ, ಅವರ ಸಾಧನೆ ಎಂದರೆ ಹಿಂದೆ ಇದ್ದ ಯಪಿಎ ಸರ್ಕಾರ ಯೋಜನೆಯನ್ನು ಹೆಸರು ಮಾಡಿದ್ದೆ ಅವರ ಸಾಧನೆ ಎಂದು ಎಐಸಿಸಿ ಜನರಲ್ ಸೆಕ್ರೆಟರಿ ವಿಷ್ಣುನಾಥನ್ ಆರೋಪಿಸಿದರು. ಮಳವಳ್ಳಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಚುನಾಯಿತ ಪ್ರತಿನಿಧಿಗಳ ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ನರೇಂದ್ರ ಮೋದಿ ರವರು ದೇಶಕ್ಕೆ ಯಾವ ಹೊಸ ಯೋಜನೆಯನ್ನು ಜನತೆ ನೀಡಿಲ್ಲ , ಕೇವಲ ಹೆಸರು ಬದಲಾವಣೆ ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ. ಎಂದು ಆರೋಪಿಸಿದರು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪ್ರಚಾರವನ್ನು ಮನೆ ಮನೆಗೂ ತೆರಳಿ ನಡೆಸಬೇಕು . ಬೂತ್ ಮಟ್ಟದ ಸಮಿತಿ ರಚಿಸುವಂತೆ ಅಧ್ಯಕ್ಷರುಗಳಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಶಾಸಕ ಪಿ.ಎಂ ನರೇಂದ್ರ ಸ್ವಾಮಿ ಮಾತನಾಡಿ, ಜಿಲ್ಲಾ ನಾಯಕರು ಕಾರ್ಯಕರ್ತರ ಹಾಗೂ ಮುಖಂಡರನ್ನು ಕಡೆಗಣಿಸುತ್ತಿದ್ದು ಆದರೂ ಜಿಲ್ಲೆಯಲ್ಲಿ ಕಾಂಗ್ರೆಸ್ ಶಕ್ತಿ ಕುಗ್ಗಿಲ್ಲ ಎಂದು ತಿಳಿಸಿದರು. ಕಾರ್ಯಕ್ರಮ ದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಂಪಗಿ, ಜಿಲ್ಲಾಧ್ಯಕ್ಷ ಆತ್ಮಾನಂದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ಪುಟ್ಟರಾಮು, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಆರ್.ಎನ್ ವಿಶ್ವಾಸ್, ಜಿ.ಪಂ ವಿರೋಧ ಪಕ್ಷ ನಾಯಕ ಹನುಮಂತು, ಸುಜಾತ ಸುಂದ್ರಪ್ಪ, ಸೇರಿದಂತೆ ಮತ್ತಿತರರು ಇದ್ದರು

LEAVE A REPLY

Please enter your comment!
Please enter your name here