ಕಾಂಗ್ರೇಸ್ ತುಘಲಕ್ ದರ್ಬಾರ್

0
1753

ಬೆಂಗಳೂರು/ಕೃಷ್ಣರಾಜಪುರ: ರಾಜ್ಯದಲ್ಲಿ ಆಳ್ವಿಕೆಯಲ್ಲಿರುವ ಕಾಂಗ್ರೇಸ್ ತುಘಲಕ್ ದರ್ಬಾರ್ ಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆಂದು ಕೇಂದ್ರ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

ಇಲ್ಲಿನ ದೇವಸಂದ್ರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಆಯೋಜಿಸಿದ್ದ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೇಸ್ ಸರ್ಕಾರ ರಾಜ್ಯದಲ್ಲಿ ನಾಲ್ಕು ವರ್ಷಗಳ ತನ್ನ ಆಳ್ವಿಕೆಯಲ್ಲಿ ಜನರ ಹಣವನ್ನು ಲೂಟಿ ಹೊಡೆಯುವ ಕಾರ್ಯ ಮಾಡುತ್ತಿದ್ದು, ಇದು ಜನರ ಕೆಂಗಣ್ಣಿಗೆ ಗುರಿಯಾಗಿದೆ, ಕಾಂಗ್ರೇಸ್ ಮುಕ್ತ ದೇಶಕ್ಕೆ ಜನತೆ ಒಲವು ತೋರುತ್ತಿದ್ದು, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆಂದು ತಿಳಿಸಿದರು.

ಉತ್ತರ ಪ್ರದೇಶ ಮತ್ತು ಉತ್ತರಾ ಖಂಡ ಚುನಾವಣಾ ಫಲಿತಾಂಶ ಕಾಂಗ್ರೇಸ್ ಮುಕ್ತ ಭಾರತಕ್ಕೆ ಜನತೆಯ ಒಲವನ್ನು ಎತ್ತಿಹಿಡಿದಿದೆ. ಅತಂತ್ರ ಫಲಿತಾಂಶ ಬಂದಿರುವ ರಾಜ್ಯಗಳಲ್ಲೂ ಜನತೆ ಬಿಜೆಪಿ ಪಕ್ಷದ ಆಳ್ವಿಕೆಯನ್ನೇ ಭಯಸುತ್ತಿದ್ದಾರೆ. ಬಿಜೆಪಿ ಪಕ್ಷ ನೇತೃತ್ವದ ಕೇಂದ್ರದ ಆಳ್ವಿಕೆಯ ಜನಪರ ಯೋಜನೆಗಳು ಜನರಲ್ಲಿ ಆಶಾಭಾವ ಮೂಡಿಸಿದೆ. ದೇಶದ ಹಿತ ಬಿಜೆಪಿ ಆಳ್ವಿಕೆಯಲ್ಲಿ ಮಾತ್ರ ಸಾಧ್ಯ ಎಂಬ ಭಾವನೆ ಮೂಡಿದೆ,

ಕಾಂಗ್ರೆಸ್ ದುರಾಡಳಿತಕ್ಕೆ ಹಲವು ನಾಯಕರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ದೇಶದ ಅಭಿವೃದ್ಧಿಗೆ ಜನತೆ ಒಮ್ಮತದಿಂದ ಕೈಜೋಡಿಸುತ್ತಿದ್ದು ಖಚಿತವಾಗಿ ಭಾರತ ವಿಶ್ವಕ್ಕೆ ಗುರುವಾಗಲಿದೆ ಎಂದರು.

ಇದೇ ವೇಳೆ ಮಾತನಾಡಿದ ದೇವೇಂದ್ರ ಕಾಂಗ್ರೇಸ್ ಪಕ್ಷದಲ್ಲಿ ಇಂದಿರಾ ಗಾಂಧಿಯವರ ಕಾಲದಲ್ಲಿದ್ದ ಶಿಸ್ತು ಕಾಣೆಯಾಗಿದ್ದು, ನಿಷ್ಠಾವಂತ ಕಾರ್ಯಕರ್ತರನ್ನು ವಿಶ್ವಸಕ್ಕೆ ತೆಗೆದುಕೊಳ್ಳುತ್ತಿಲ್ಲ, ಕಾಂಗ್ರೇಸ್ನಲ್ಲ ಅಭಿವೃದ್ಧಿಗೆ ಆದ್ಯತೆ ನೀಡುತ್ತಿಲ್ಲ, ಅವ್ಯವಹಾರ ಅಕ್ರಮಗಳು ತಾಂಡವವಾಡುತ್ತಿವೆ, ಸ್ವಜನ ಪಕ್ಷ ಪಾತ ತಾರಕ್ಕಕ್ಕೇರಿದ್ದು, ಇದರಿಂದ ಬೇಸತ್ತ ಹಲವರು ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ, ಬಿಜೆಪಿ ಪಕ್ಷದ ಸಿದ್ದಾಂತ ಮತ್ತು ನರೇಂದ್ರ ಮೋದಿಯವರ ಆಡಳಿತ ವೈಖರಿಗೆ ಮೆಚ್ಚಿ ಕಾಂಗ್ರೇಸ್ ತೊರೆದು ಬಿಜೆಪಿಗೆ ಸೇರುತ್ತಿದ್ದೇನೆಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಶಾಸಕ ನಂದೀಶ್ ರೆಡ್ಡಿ, ಕ್ಷೇತ್ರಾಧ್ಯಕ್ಷ ಚಿದಾನಂದ ಮೂರ್ತಿ, ಸಚ್ಚಿದಾನಂದ ಮೂರ್ತಿ, ಮಾಜಿ ಪಾಲಿಕೆ ಸದಸ್ಯೆ ಗೀತಾ ವಿವೇಕಾನಂದ್ ಬಾಬು , ಸಿದ್ದಲಿಂಗಯ್ಯ, ಎಸ್.ಎಸ್.ಪ್ರಸಾದ್, ಶಿಗೇಹಳ್ಳಿ ಸುಂದರ್, ಕೇಶವ್ ಮೂರ್ತಿ, ಟಿ.ರಮೇಶ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

LEAVE A REPLY

Please enter your comment!
Please enter your name here