ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ.

0
201

ಬೆಂಗಳೂರು/ಕೆ.ಆರ್.ಪುರ: ರಾಜ್ಯದ ಕಾಂಗ್ರೆಸ್‌ ಸರ್ಕಾರದ ಆಡಳಿತ ಹಾಗೂ ಸ್ಥಳಿಯ ಶಾಸಕ ಬೈರತಿ ಬಸವರಾಜು ಅಭಿವೃದ್ದಿ ಕೆಲಸವನ್ನೂ ಮೆಚ್ಚಿ ಬಿಜೆಪಿ ತೊರೆದು ಕಾಂಗ್ರೇಸ್ ಗೆ ಸೇರ್ಪಡೆಗೊಳ್ಳುತ್ತಿದ್ದೆವೆಂದು ಕರವೆ ವಿ.ವಿಶ್ವನಾಥ್ ತಿಳಿಸಿದರು. 

ಇಲ್ಲಿನ ರಾಮಮೂರ್ತಿನಗರದ ಉತ್ತಮ ಸಾಗರ್ ಹೋಟೆಲ್ ನಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಬಿಜೇಪಿಯನ್ನು ತೊರೆದು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಇದೇ ವೇಳೆ ಮಾತನಾಡಿದ ಶಾಸಕ ಬಸವರಾಜ್, ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರ್ಕಾರ 4ವರ್ಷಗಳಿಂದ ಬಡವರ ಪರವಾದ ಆಳ್ವಿಕೆ ನೀಡಿದೆ, ಉಳಿದೊಂದು ವರ್ಷವೂ ಸಹಿತ ಉತ್ತಮ ಯೋಜನೆಗಳ ಕೊಡುಗೆಯನ್ನು ನೀಡಲಿದೆ.ನಮ್ಮ ಪಕ್ಷದ ಆಳ್ವಿಕೆಗೆ ಮೆಚ್ಚಿ ಬಿಜೆಪಿಯ ಕಾರ್ಯಕರ್ತರು ಪಕ್ಷಕ್ಕೆಸೇರ್ಪಡೆಯಾಗುತ್ತಿದ್ದಾರೆಂದರು.
ಇದೆ ವೇಳೆ ರಾಮಮೂರ್ತಿನಗರದ ಕೃಷ್ಣಾರಾವ್, ಕುಮರೇಶ್,ವಿಜಯ್ ಕುಮಾರ್ ಸೇರಿದಂತೆ ಇತರರು ಬಿಜೆಪಿ ಪಕ್ಷ ತೊರೆದು ಕಾಂಗ್ರೇಸ್ ಗೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮುನೇಗೌಡ, ಮುಖಂಡರಾದ ಇಟಾಚಿ ಮಂಜುನಾಥ್,ಎಂ.ಎಲ್.ಡಿ.ಸಿ ಮುನಿರಾಜು , ಸಯ್ಯದ್ ಮಸ್ತಾನ್,ಲೋಕೇಷ್, ಸೂರಿ, ಸೋಮೇಶ್, ಸೇರಿದಂತೆ ಇತರರಿದ್ದರು.

LEAVE A REPLY

Please enter your comment!
Please enter your name here