ಕಾಟಾಚಾರದ ಶುದ್ಧಕುಡಿಯುವ ನೀರಿನ ಘಟಕ

0
164

ಚಿಕ್ಕಬಳ್ಳಾಪುರ/ ಶಿಡ್ಲಘಟ್ಟ : ತಾಲ್ಲೂಕಿನ ಕೆ.ಮುತ್ತುಕದ ಹಳ್ಳಿ ಯಲ್ಲಿ ಬೇಸಿಗೆಗೆ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ವಾಡಿಕೆಯ ಮಳೆ ಸುರಿಯದ ಕಾರಣ ಅಂತಜ೯ಲ ಬತ್ತಿ ಹೋಗಿದ್ದು, ಹನಿ ನೀರಿಗಾಗಿ ಜನ ಪರಿತಪಿಸುವಂತಾಗಿದೆ. ಗ್ರಾಮದಲ್ಲಿ ಕುಡಿಯುವ ನೀರಿಗೂ ಹಾಹಾಕಾರವಾಗಿದ್ದು, ಊರಿನ ಎರಡೂ ಕೊಳವೆ ಬಾವಿಗಳಲ್ಲಿ ಒಂದರಲ್ಲಿ ಸಾದಾರಣ ಮಟ್ಟದ ನೀರು ಬರುತ್ತಿದ್ದು ಮತ್ತೊಂದು ಕೊಳವೆ ಬಾವಿಯಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಇರುವ ಒಂದು ಕೊಳವೆ ಬಾವಿಯಿಂದ ಜನರ ಬಳಕೆ , ಜಾನುವಾರುಗಳಿಗೆ ಬಳಕೆ ಯಾಗುತ್ತಿದ್ದು, ನೂತನವಾಗಿ ಪ್ರಾರಂಭವಾಗಿರುವ ಆರೋಗ್ಯ ಕೇಂದ್ರಕ್ಕೆ ನೀರಿನ ಅಭಾವ ಸೃಷ್ಟಿ ಯಾಗಿದೆ. ಎರಡು ವಷ೯ಗಳ ಹಿಂದೆ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಸಿದ್ದು, ಅದಕ್ಕೆ ಮೋಟರ್ ಸಹಾ ಬಿಟ್ಟಿದ್ದು, ನೀರಂತೂ ಹೊರಗಡೆ ತರಲಿಲ್ಲ. ವಿದ್ಯುತ್ ಸಂಪಕಕಲ್ಪಿಸಿಲ್ಲ. ಕಾಮಗಾರಿ ಮುಗಿದು ವಷ೯ ಕಳೆದರೂ ಗ್ರಾಮದಲ್ಲಿ ಅಳವಡಿಸಿರುವ ಶುದ್ಧ ನೀರಿನ ಘಟಕಕ್ಕೆ ಉದ್ಘಾಟನಾ ಭಾಗ್ಯ ದೊರೆತಿಲ್ಲ. ಇಲ್ಲಿನ ಶುದ್ಧ ನೀರಿನ ಘಟಕವನ್ನು ಕೆ ಆರ್ ಡಿ ಎಲ್ ಸಂಸ್ಥೆಯವರು ಗುತ್ತಿಗೆ ಪಡೆದು ಕಾಮಗಾರಿಯನ್ನು ಪೂಣ೯ಗೊಳಿಸಿ ಪಂಚಾಯಿತಿಗೆ ಹಸ್ತಾಂತರ ಮಾಡದೆ ಉಳಿಸಿಕೊಂಡಿರುವುದರಿಂದ ಪಂಚಾಯಿತಿ ವತಿಯಿಂದ ಇದುವರೆಗೂ ಪೈಪ್ ಲೈನ್ ಮತ್ತು ವಿದ್ಯುತ್ ಸಂಪಕ೯ ನೀಡಿಲ್ಲ. ಐದು ಲಕ್ಷದ ವೆಚ್ಚದಲ್ಲಿ ನಿಮಿ೯ಸಿರುವ ಶುದ್ಧ ನೀರಿನ ಘಟಕವನ್ನು ಅವೈಜ್ಞಾನಿಕವಾಗಿ ನಿಮಿ೯ಸಿದ್ದಾರೆ.ನೀರಿನ ಶೇಖರಣೆ ಮಾಡುವಂತಹ ಟ್ಯಾಂಕ್ ನೀರಿನ ಘಟಕದ ಹೊರಗಡೆ ಅಳವಡಿಸಿದ್ದು, ಅದಕ್ಕೆ ಯಾವುದೇ ಮೇಲ್ಚಾವಣಿ ಇಲ್ಲದೆ ಇರುವುದರಿಂದ ಪಾಚಿ ಕಟ್ಟುಕೊಳ್ಳುವುದು ನೀರು ಬಿಸಿಯಾಗುವುದು ,ಕಾವಲುಗಾರಿಲ್ಲದ ಕಾರಣ ಕಿಡಿಗೇಡಿಗಳು ವಿಷಕಾರಿ ಅನಿಲ ಮಿಶ್ರಣ ಹಾಗೂ ಟ್ಯಾಂಕ್ ನಾಶಪಡಿಸುವಂತಹ ದುರಂತಗಳು ಸುಮಾರು ಸ್ಥಳಗಳಲ್ಲಿ ನಡೆದಿದೆ. ಅಂತಹ ಸನ್ನಿವೇಶಗಳು ನಡೆಯದಂತೆ ಎಚ್ಚೆತ್ತುಕೊಂಡು ಕೂಡಲೇ ಅವೈಜ್ಞಾನಿಕ ಟ್ಯಾಂಕ್ ಘಟಕದ ಒಳ ಭಾಗದಲ್ಲಿ ಅಳವಡಿಸಬೇಕು. ಈ ಸಮಸ್ಯೆಗಳ ಬಗ್ಗೆ ಸಂಬಂಧ ಪಟ್ಟವರೂ ಸರಿಯಾದ ಉತ್ತರ ನೀಡದೆ ಹಾರಿಕೆ ಉತ್ತರ ನೀಡುವುದು ಬಿಟ್ಟು ಕೂಡಲೇ ಮುಂಜಾಗ್ರತೆ ವಹಿಸಿಕೊಳ್ಳ ಬೇಕೆಂದ ಒತ್ತಾಯ ಇಲ್ಲಿನ ಸ್ಥಳೀಯರದ್ದು.⁠⁠⁠⁠

LEAVE A REPLY

Please enter your comment!
Please enter your name here